Important
Trending

Peacock: ರಾಷ್ಟ್ರಪಕ್ಷಿ ನವಿಲಿನ ಬೇಟೆ: ಆರೋಪಿಯ ಬಂಧನ

ಭಟ್ಕಳ: ರಾಷ್ಟ್ರಪಕ್ಷಿನವಿಲನ್ನು (Peacock) ಗುಂಡು ಹಾರಿಸಿ ಬೇಟೆಯಾಡಿದ ಘಟನೆ ಮುಟ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೇಹಳ್ಳಿಯಲ್ಲಿ ನಡೆದಿದೆ. ಈ ಕುರಿತು ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅರಣ್ಯಪ್ರದೇಶದಲ್ಲಿ ಏರ್-ಗನ್‌ನಿಂದ ನವಿಲಿಗೆ ಬೇಟೆಯಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಮೃತ ನವಿಲನ್ನು (Peacock) ದ್ವಿಚಕ್ರದಲ್ಲಿ ಸಾಗಿಸುತ್ತಿರುವಾಗ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ, ಪುರವರ್ಗ ಮುಗಳಿ ಹೊಂಡ ನಿವಾಸಿ ಇನಾಯತ್ ಉಲ್ಲಾ ಮೈಲಪ್ಪಿ (40) ಎಂದು ತಿಳಿದುಬಂದಿದೆ. ಆರೋಪಿಯನ್ನು ವನ್ಯಜೀವಿ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಹೊನ್ನಾವರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಟ್ಕಳ ಉಪವಿಭಾಗ ಅವರ ಮಾರ್ಗದರ್ಶನದಲ್ಲಿ , ಭಟ್ಕಳ ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ ಮತ್ತು ಉಪವಲಯ ಅರಣ್ಯಾಧಿಕಾರಿಗಳಾದ ಸಂದೀಪ ಭಂಡಾರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್, ಭಟ್ಕಳ

Back to top button