Important
Trending

ಸ್ಕೂಟಿ ಮತ್ತು ಲಾರಿ ನಡುವೆ ಅಪಘಾತ: ಚಿಕಿತ್ಸೆ ಫಲಿಸದೆ ಯುವಕ ಸಾವು

ಹೊನ್ನಾವರ: ಸ್ಕೂಟಿ ಮತ್ತು ಲಾರಿ ನಡುವೆ ವಾರದ ಹಿಂದೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿದ್ದ ಮಂಕಿಯ ಕಾರ್ತಿಕ್ ನಾಯ್ಕ ಎಂಬ ಯುವಕ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾನೆ. ಮಂಕಿ ಅನಂತವಾಡಿ ಜಡ್ಡಿ ಕ್ರಾಸ್ ಹತ್ತಿರ ಅಪಘಾತ ಸಂಭವಿಸಿತ್ತು. ಮೃತ ಯುವಕ ಹೊನ್ನಾವರದ ಎಸ್‌ಡಿಎಂ ಕಾಲೇಜಿನ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಎಂದು ತಿಳಿದುಬಂದಿದೆ. ಯುವಕನ ಅಕಾಲಿಕ ನಿಧನಕ್ಕೆ ಕುಟುಂಬಸ್ಥರು, ಊರಿನವರು, ಸ್ನೇಹಿತರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ವಿಸ್ಮಯ ನ್ಯೂಸ್, ಹೊನ್ನಾವರ

Back to top button