ಕಾರವಾರ: ವಿದ್ಯಾರ್ಥಿನಿಯೊಬ್ಬಳು ಶಾಲೆಗೆ ಹೋದ ವೇಳೆ ಕಾಣೆಯಾಗಿದ್ದು, ನಂತರ ಸಂಬoಧಿಕರ ಮನೆಗೆ ಬಂದ ಬಾಲಕಿ ತನ್ನನ್ನು ಅಪಹರಣ ಮಾಡಿ ವ್ಯಾನಿನಲ್ಲಿ ಹೊತ್ತೊಯ್ಯಲಾಗಿತ್ತು. ಆದರೆ, ನಾನು ತಪ್ಪಿಸಿಕೊಂಡು ಬಂದೆ ಎಂದು ಹೇಳಿದ್ದರು. ಇದು ದಾಂಡೇಲಿಯಲ್ಲಿ ನಡೆದ ಈ ಘಟನೆ ಎಲ್ಲೆಡೆ ಸುದ್ದು ಮಾಡಿತ್ತು. ಇದೀಗ ಪೊಲೀಸರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಅಸಲಿ ಕಥೆಯನ್ನು ಬಿಚ್ಚಿಟ್ಟಿದ್ದಾರೆ.
KSRTC ಬಸ್ ಬ್ರೇಕ್ ಫೇಲ್: ಹಿಮ್ಮುಖವಾಗಿ ಚಲಿಸಿ ಮೂರು ರಿಕ್ಷಾಗೆ ಡಿಕ್ಕಿ: ತಪ್ಪಿದ ಭಾರೀ ಅನಾಹುತ
ವಿದ್ಯಾರ್ಥಿನಿಯ ಮನೆಯವರು ವಿಚಾರಿಸಿದಾಗ ತನ್ನನ್ನು ಮಾರುತಿ ವ್ಯಾನಲ್ಲಿ ಬಂದ ಯಾರೋ ಇಬ್ಬರು ಕಿಡ್ನಾಪ್ ಮಾಡಿದ್ದರು. ಕಿತ್ತೂರು ಚೆನ್ನಮ್ಮ ವೃತ್ತದ ಬಳಿ ವಾಹನವನ್ನು ನಿಲ್ಲಿಸಿದಾಗ ನಾನು ಅವರಿಂದ ತಪ್ಪಿಸಿಕೊಂಡು ಬಂದಿದ್ದೇನೆ ಎಂದು ಕಥೆಯನ್ನ ಹೇಳಿದ್ದಳು. ಮನೆಯವರು ಇದನ್ನೇ ನಂಬಿದ್ದರು. ಬಳಿಕ ಪೊಲೀಸರಿಗೆ ದೂರು ನೀಡಿದ್ದರು. ಪಾಲಕರು ಕೂಡಾ ತಮ್ಮ ಮಗಳ ಮಾತನ್ನು ನಂಬಿ ಅಪಹರಣಕಾರರು ಬಂದು ನಮ್ಮ ಮಗಳನ್ನು ಅಪಹರಿಸಿದ್ದಾರೆ ಎಂದು ದೂರಿದ್ದರು.
ತನಿಖೆ ಆರಂಭಿಸಿದ ಪೊಲೀಸರು ವಿದ್ಯಾರ್ಥಿನಿಯ ಬಳಿ ವಿಚಾರಿಸಿದ್ದಾರೆ. ನಿನ್ನನ್ನ ಕರೆದುಕೊಂಡು ಹೋದವರು ಯಾರು? ನೀನು ಯಾವ ದಾರಿಯಲ್ಲಿ ಹೋಗುತ್ತಿದ್ದೆ. ಎಲ್ಲಿಂದ ಕಿಡ್ನಾಪ್ ಮಾಡಿದ್ದರು ಎಂಬ ಮಾಹಿತಿಯನ್ನ ಪಡೆದಿದ್ದರು. ಪೊಲೀಸರನ್ನು ಕೂಡಾ ನಂಬಿಸಿದ್ದಳು ವಿದ್ಯಾರ್ಥಿನಿ. ಆದರೆ, ಪೊಲೀಸರು ವಿದ್ಯಾರ್ಥಿನಿ ತಪ್ಪಿಸಿಕೊಂಡ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಅಲ್ಲಿ ಅಪಹರಣದ ಸುಳಿವು ಸಿಕ್ಕಿರಲಿಲ್ಲ. ಪೊಲೀಸರಿಗೆ ಅನುಮಾನ ಬಂದು ವಿಚಾರಿಸಿದಾ ಸತ್ಯ ಹೊರಬಂದಿದೆ.
ವಿದ್ಯಾರ್ಥಿನಿಯೇ ಡ್ರಾಮಾ ಮಾಡಿದಳು?
ಹಳೆದಾಂಡೇಲಿ ಭಾಗದ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ 12 ವರ್ಷದ ವಿದ್ಯಾರ್ಥಿನಿಯ ಅಪಹರಣವಾಗಿರಲಿಲ್ಲ. ಆಕೆಗೆ ಶಾಲೆಗೆ ಹೋಗಲು ಮನಸ್ಸಿರಲಿಲ್ಲ. ಅಲ್ಲದೆ, ಪರೀಕ್ಷೆ ಬರೆಯಲು ಹಿಂದೇಟು ಹಾಕಿದ್ದಳು. ಹೀಗಾಗಿ ಶಾಲೆ ಮತ್ತು ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಈ ರೀತಿಯಾಗಿ ಅಪಹರಣದ ಪ್ರಕರಣದ ಕುರಿತಾಗಿ ಸುದ್ದಿಯನ್ನು ಹರಿಬಿಟ್ಟಿದ್ದಳು.
ವಿಸ್ಮಯ ನ್ಯೂಸ್, ಕಾರವಾರ