Important
Trending

ಜಿಲ್ಲಾಕಾರಾಗೃಹದ ಸಮೀಪ ಬರುತ್ತಿದ್ದಂತೆ ಭದ್ರತಾ ಸಿಬ್ಬಂದಿಯನ್ನು ತಳ್ಳಿ ತಪ್ಪಿಸಿಕೊಂಡು ಓಡಿಹೋದ ಆರೋಪಿ

ಭಟ್ಕಳ: ಮೊಬೈಲ್ ಅಂಗಡಿ ಕಳ್ಳತನಗೈದ ಆರೋಪಿಯನ್ನು ಕುಂದಾಪುರ ಪೊಲೀಸರು ಕೋರ್ಟಿಗೆ ಹಾಜರುಪಡಿಸಿ ಬಳಿಕ ಹಿರಿಯಡ್ಕ ಜೈಲಿಗೆ ಕೊಂಡೊಯ್ಯುತ್ತಿದ್ದ ವೇಳೆ ಜೈಲಿನ ದ್ವಾರದ ಎದುರು ಪೊಲೀಸರಿಗೆ ಹಲ್ಲೆಗೈದು ಆರೋಪಿ ಪರಾರಿಯಾದ ಘಟನೆ ನಡೆದಿದೆ. ಭಟ್ಕಳ ನಿವಾಸಿ ಮೊಹಮ್ಮದ್ ರಾಹೀಕ್ (22) ತಪ್ಪಿಸಿಕೊಂಡ ಆರೋಪಿ. ಈತ ಕೆಲ ತಿಂಗಳ ಹಿಂದೆ ಕುಂದಾಪುರ ಠಾಣಾ ವ್ಯಾಪ್ತಿಯ ಬೀಜಾಡಿ ಎಂಬಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ.

ಜಿಲ್ಲಾಕಾರಾಗೃಹದ ಸಮೀಪ ಬರುತ್ತಿದ್ದಂತೆ ಭದ್ರತಾ ಸಿಬ್ಬಂದಿಯನ್ನು ತಳ್ಳಿ ತಪ್ಪಿಸಿಕೊಂಡು ಓಡಿಹೋದ ಆರೋಪಿ

ಈತನನ್ನು ಅಕ್ಟೋಬರ್ 19ರಂದು ಕುಂದಾಪುರ ಪೊಲೀಸರು ಬಂಧಿಸಿ, ಖಾಸಗಿ ವಾಹನದಲ್ಲಿ ಭದ್ರತೆಯಲ್ಲಿ ಕುಂದಾಪುರ ಕೋರ್ಟಿಗೆ ಹಾಜರುಪಡಿಸಿದ್ದರು. ಕೋರ್ಟ್ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಜಿಲ್ಲಾ ಕಾರಾಗೃಹವಾದ ಹಿರಿಯಡ್ಕ ಜೈಲಿಗೆ ಒಪ್ಪಿಸುವಂತೆ ಆದೇಶಿಸಿತ್ತು. ಅದರಂತೆ ಪೊಲೀಸರು ಕುಂದಾಪುರದಿoದ ಹೊರಟು ಜಿಲ್ಲಾಕಾರಾಗೃಹದ ಸಮೀಪ ಬರುತ್ತಿದ್ದಂತೆ ಆರೋಪಿ ಭದ್ರತೆಯಲ್ಲಿದ್ದ ಸಿಬ್ಬಂದಿಯವರನ್ನು ತಳ್ಳಿ, ತಪ್ಪಿಸಿಕೊಂಡು ಓಡಿಹೋಗಿದ್ದಾನೆ ಎಂದು ದೂರು ದಾಖಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button