Big NewsImportant
Trending

ಜಾನುವಾರುಗಳಿಗೆ ಹಿಂಗಾರ, ಅಡಿಕೆ ಮಾಲೆಗಳಿಂದ ಸಿಂಗಾರ: ಇಲ್ಲಿದೆ ವಿಶೇಷ ಆಚರಣೆ

ಕಾರವಾರ: ರೈತರ ಪಾಲಿಗೆ ಬಹುದೊಡ್ಡ ಹಬ್ಬ ಅಂದ್ರೆ ಅದು ದೀಪಾವಳಿ, ಮೂರು ದಿನಗಳ ಕಾಲ ಬಲೀಂದ್ರನನ್ನು ತಂದು ಪೂಜೆ ಸಲ್ಲಿಸುವುದರ ಜೊತೆಗೆ ರೈತರ ಓಡನಾಡಿ ಗೋವುಗಳಿಗೂ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅದರಂತೆ ಇಂದು ಉತ್ತರಕನ್ನಡ ಜಿಲ್ಲೆಯಾದ್ಯಂತ ಅದ್ದೂರಿಯಾಗಿ ಹಬ್ಬವನ್ನು ಆಚರಿಸಿದ್ದು ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ. ಒಂದೆಡೆ ಕಾಲ್ಕಿತ್ತು ಓಡುತ್ತಿರೋ ಹೋರಿಗಳು . ಇನ್ನೊಂದೆಡೆ ಅವುಗಳನ್ನು ಹಿಡಿಯಲು ಹರಸಾಹಸ ಪಡುತ್ತಿರೋ ಯುವಕರು , ಮತ್ತೊಂದೆಡೆ ಈ ಸಾಹಸಮಯ ದೃಶ್ಯಗಳನ್ನು ಕಣ್ಣುಂಬಿಕೊಳ್ಳುತ್ತಿರುವ ಸಾರ್ವಜನಿಕರು , ಅರೆ ಇದೇನೂ ಹೋರಿ ಓಡಿಸೊ ಸ್ಪರ್ಧೆ ಅಂಡ್ಕೊoಡ್ರಾ . . . ? ಖಂಡಿತಾ ಅಲ್ಲ . . . ! ರೈತರ ಪಾಲಿನ ದೊಡ್ಡಹಬ್ಬ ಎಂದೇ ಕರೆಸಿಕೊಳ್ಳುವ ದೀಪಾವಳಿ ಸಂಭ್ರಮ.

ಉತ್ತರಕನ್ನಡ ಜಿಲ್ಲಾಧಿಕಾರಿಗಳ ವರ್ಗಾವಣೆ: ನೂತನ ಜಿಲ್ಲಾಧಿಕಾರಿಯಾಗಿ ಪ್ರಭುಲಿಂಗ ಕವಳಿಕಟ್ಟಿ ನಿಯೋಜನೆ

ಹೌದು , ಸಿದ್ದಾಪುರ ತಾಲ್ಲೂಕಿನ ದೊಡ್ಮನೆ ವ್ಯಾಪ್ತಿಯ ಉಡಳ್ಳಿ ಬೀಳೆಗೊಡ ಹಾಗೂ ಅಲ್ಕುಣಿ ಗ್ರಾಮಗಳ ಜನರ ದೀಪಾವಳಿ ಸಂಭ್ರಮ ಇದು. ಕಳೆದ ಮೂರು ದಿನಗಳಿಂದ ದೀಪಾವಳಿ ಹಬ್ಬವನ್ನ ವಿಜ್ರಂಭಣೆಯಿAದ ಆಚರಿಸಲಾಯಿತು. ಬಲೀಂದ್ರನನ್ನು ತಂದು ವಿಶೇಷ ಪೂಜೆ ಸಲಿಸಿದ ರೈತರು ಬಲಿಪಾಡ ದಿನವಾದ ಇಂದು ಗೋವುಗಳಿಗೆ ಸಿಂಗಾರ, ರೊಟ್ಟಿ , ಪತ್ತೆತೆನ್ನೆ ಎಲೆಗಳಿಂದ ಮಾಡಿದ ದಂಡೆಗಳನ್ನು ಕಟ್ಟಿ ವಿಶೇಷ ಪೂಜೆ ಸಲ್ಲಿಸಿದರ. ನಂತರ ಅವುಗಳನ್ನು ಚೌಲೂ, ಬಲೂನ್, ಬಾಸಿಂಗ ಸೇರಿದಂತೆ ಬಣ್ಣದ ಕಾಗದ ಹೂವುಗಳಿಂದ ಶೃಂಗರಿಸಿ ಬೆದರಿಸಲಾಯಿತು.
ಇನ್ನು ದೀಪಾವಳಿ ಹಬ್ಬವನ್ನು ಎಲ್ಲೆಡೆ ಸಂಭ್ರಮದಿoದ ಆಚರಿಸಲಾಗುತ್ತಿದೆ.

ನಮ್ಮೊಂದಿಗೆ ದುಡಿದು ನಮ್ಮ ಮನೆಗೆ ಆಧಾರವಾಗಿರುವ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಜತೆಗೆ ಅವುಗಳನ್ನು ಶೃಂಗರಿಸಿ ಮೆರವಣಿಗೆ ನಡೆಸಲಾಯಿತು . ಹೀಗೆ ಸದಾ ನಮ್ಮ ಒಡನಾಡಿಯಾಗಿರುವ ಗೋವುಗಳಿಗೆ ಈ ದಿನದಂದು ವಿಶೇಷ ಪೂಜೆ ಸಲ್ಲಿಸಿದ ಸಂತೃಪ್ತಿ ನಮ್ಮದಾಗಿದೆ ಎನ್ನುತ್ತಾರೆ ಸ್ಥಳೀಯರು .ಇನ್ನು ಗ್ರಾಮದಲ್ಲಿ ಬಹುತೇಕರು ಕೃಷಿಯನ್ನೇ ನಂಬಿ ಬದುಕುತ್ತಿದ್ದವರು, ಸದಾ ಗೋವುಗಳೊಂದಿಗೆ ಒಡನಾಟ ಹೊಂದಿರುವ ಕಾರಣ ದೀಪಾವಳಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಅದರಂತೆ ಈ ಭಾರಿಯೂ ಅದ್ದೂರಿಯಾಗಿ ಆಚರಿಸಿದ್ದು ಗೋವುಗಳನ್ನು ಅಲಂಕರಿಸಿ ಬೆದರಿಸುವ ಮೂಲಕ ಸಂಭ್ರಮಿಸಿದರು.

ವಿಸ್ಮಯ ನ್ಯೂಸ್, ಕಾರವಾರ

Back to top button