Big NewsImportant
Trending

ಮೂವರು ಪುಟ್ಟ ಮಕ್ಕಳ ಜತೆ ನಾಪತ್ತೆಯಾದ ಮಹಿಳೆ ? ಕಾಣೆಯಾದ ತನ್ನ ಹೆಂಡತಿ ಮತ್ತು ಮಕ್ಕಳನ್ನು ಹುಡುಕಿ ಕೊಡುವಂತೆ ಪೊಲೀಸ್ ದೂರು

ಅಂಕೋಲಾ: ತನ್ನ ಹೆಂಡತಿ ಮೂವರು ಮಕ್ಕಳೊಂದಿಗೆ ಕಾಣೆಯಾಗಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ತಾಲೂಕಿನ ರಾಮನಗುಳಿ ನಿವಾಸಿ ರುಕ್ಸಾನಾ ಬೇಗಂ ಮೂಸಾ ಶೇಖ್(29) ಈಕೆ ತನ್ನ ಮಕ್ಕಳಾದ ಮೂರನೇ ತರಗತಿ ವಿದ್ಯಾರ್ಥಿ ಮಹಮ್ಮದ್ ಸಿರಾಜ್ ಮೂಸಾ ಶೇಖ್ (9) ಎರಡನೇ ತರಗತಿ ವಿದ್ಯಾರ್ಥಿ ಮಹಮ್ಮದ್ ಸರ್ತಾಜ್ ಮೂಸಾ ಶೇಖ್ (8) ಮತ್ತು ಒಂದೂವರೆ ವರ್ಷದ ಮಗಳು ಆಯೇಷಾ ಅವರೊಂದಿಗೆ ಅಕ್ಟೋಬರ್ 28 ರಂದು ರಾತ್ರಿ ಯಾರಿಗೂ ಹೇಳದೆ ಮನೆಯಿಂದ ಹೋದವಳು ತಿರುಗಿ ಬಂದಿಲ್ಲ ಎಂದು ತಿಳಿದು ಬಂದಿದೆ.

ಈಜಲು ತೆರಳಿದ ವೇಳೆ ಸಮುದ್ರದ ಅಲೆಗಳ ರಭಸಕ್ಕೆ ಸಿಲುಕಿ ಖಾಸಗಿ ಕಂಪೆನಿ ಉದ್ಯೋಗಿ ಸಾವು

ಈ ಕುರಿತು ಮಹಿಳೆಯ ಪತಿ ಮೂಸಾ ಜಿಕ್ರಿಯಾ ಶೇಖ್ ಎನ್ನುವವರು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ. ಈ ಹೆಂಗಸು ಮತ್ತು ಮಕ್ಕಳು ಎಲ್ಲಿಯಾದರೂ ಕಂಡು ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

hitendra naik

Related Articles

Back to top button