Join Our

WhatsApp Group
Important
Trending

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಆಯ್ಕೆಯಾದವರ ಪಟ್ಟಿ ಇಲ್ಲಿದೆ ನೋಡಿ

ಕಾರವಾರ: ನವೆಂಬರ್ 1 ರಂದು ನಡೆಯುವ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತಿದ್ದು, ಈ ಬಾರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 16 ಜನರನ್ನು ಆಯ್ಕೆ ಮಾಡಲಾಗಿದೆ. ಈ ಆಯ್ಕೆಯನ್ನು ರಾಜ್ಯೋತ್ಸವ ಸಮಿತಿ ಪ್ರಕಟಿಸಿದೆ. ಕ್ರೀಡಾ ಕ್ಷೇತ್ರದಿಂದ ವೆಂಕಟೇಶ್ ನಾರಾಯಣ ಪ್ರಭು ಕುಮಟಾ, ಅಂತಾರಾಷ್ಟ್ರೀಯ ತರಬೇತುದಾರ ತುಕಾರಾಮ್ ಮಾತ್ರು ಗೌಡ ಹಳಿಯಾಳ, ಪ್ರಕಾಶ್ ಬಿ.ರೇವಣಕರ್ ಕಾರವಾರ, ಯಕ್ಷಗಾನ ಕ್ಷೇತ್ರದಿಂದ ಸುಕ್ರಪ್ಪ ನಾರಾಯಣ್ ನಾಯ್ಕ್ ಕುಮಟಾ ಆಯ್ಕೆಯಾಗಿದ್ದಾರೆ.

ಬಿಜೆಪಿ ಪ್ಲೆಕ್ಸ್ ಓಕೆ, ಆಮ್ ಆದ್ಮಿ ಪ್ಲೆಕ್ಸ್ ಗೆ ವಿರೋಧ ಯಾಕೆ: ಆಮ್ ಆದ್ಮಿ ಪ್ಲೆಕ್ಸ್ ಗೆ ಹೆದರಿದರಾ ರಾಷ್ಟ್ರೀಯ ಪಕ್ಷಗಳು?

ಸಾಹಿತ್ಯ ಕ್ಷೇತ್ರದಿಂದ ಭಾಗೀರಥಿ ಹೆಗಡೆ ಶಿರಸಿ, ಅಶೋಕ್ ಭಟ್ ಸಿದ್ದಾಪುರ, ಸಾಹಿತ್ಯ ಸಂಸ್ಕೃತಿ ಕ್ಷೇತ್ರದಿಂದ ಬಾಬು ಅಂಬಿಗ ಕಾರವಾರ, ಜಾನಪದ ಕ್ಷೇತ್ರದಿಂದ ಶಾರದಾ ಮಹಾದೇವ ಮೊಗೇರ್ ಹೊನ್ನಾವರ,ಗುಡ್ಡಪ್ಪ ಎನ್. ಜೋಗಿ ಶಿರಸಿ, ರಂಗಭೂಮಿ ಕ್ಷೇತ್ರದಿಂದ ಅಶೋಕ್ ಮಂಗೇಶ್ ಮಹಾಲೆ ಭಟ್ಕಳ, ಕಲೆ ಕ್ಷೇತ್ರದಿಂದ ದುಂಡಪ್ಪ ಮುತ್ತಣ್ಣ ಗೂಳೂರ ದಾಂಡೇಲಿ, ಪತ್ರಿಕೋದ್ಯಮ ಕ್ಷೇತ್ರದಿಂದ ಪಿ.ಎಸ್.ಸದಾನಂದ ಮುಂಡಗೋಡ, ವೈದ್ಯಕೀಯ ಕ್ಷೇತ್ರದಿಂದ ಡಾ.ದೀಪಕ್ ಡಿ.ನಾಯಕ್ ಕುಮಟಾ, ಶಿಕ್ಷಣ ಕ್ಷೇತ್ರದಿಂದ ಮಹೇಶ್ ರಾ ನಾಯಕ್,ಅಂಕೋಲಾ, ಯು.ಎಂ.ಶಿರ್ಸಿಕರ್ ಅಂಕೋಲಾ, ಪರಿಸರ ಕ್ಷೇತ್ರದಿಂದ ಎಲ್.ಆರ್.ಹೆಗಡೆ ಕುಮಟಾ ಅವರನ್ನು ಆಯ್ಕೆ ಮಾಡಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button