ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

ಕುಮಟಾ: ಸ್ಠಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಮಾಜ ವಿಜ್ಞಾನ ಸಂಘದಡಿಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಕನ್ನಡಾಂಬೆಗೆ ಪುಷ್ಪಾರ್ಪಣೆಗೈದರು. ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಪ್ರೀತಿ ಪಿ. ಭಂಡಾರಕರ ಇವರು ಕರ್ನಾಟಕ ಏಕೀಕರಣದ ಇತಿಹಾಸವನ್ನು ಪ್ರಸ್ತುತಪಡಿಸುತ್ತ ಇಂದು ಕಇಂಗ್ಲೀಷಾದ ಕನ್ನಡ ನುಡಿಯ ಸ್ಥಿತಿಗತಿಯ ಕುರಿತು ವಿವರಿಸುತ್ತ ಖೇದ ವ್ಯಕ್ತಪಡಿಸಿದರು.

ಇಂದು ಕನ್ನಡ ಭಾಷೆಯ ಉಳಿವಿನಲ್ಲಿ ಶಿಕ್ಷಕರ ಪಾತ್ರವನ್ನು ಪ್ರಸ್ತುತಪಡಿಸಿದರು. ಪ್ರಥ್ವಿ ಹಾಗೂ ಸಂಗಡಿಗರು ನಿತ್ಯೋತ್ಸವ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಶಿಕ್ಷಕ ವಿದ್ಯಾರ್ಥಿಗಳಾದ ವಿರಾಜ ಗೌಡ ಸ್ವಾಗತಿಸಿದರು, ಗಣೇಶ ನವಲೆ ವಂದಿಸಿದರು, ಅಶ್ವಿನಿ ಬಾಂದೇಕರ ನಿರೂಪಿಸಿದರು. ಸಮಾಜ ವಿಜ್ಞಾನ ಸಂಘದ ಮಾರ್ಗದರ್ಶಕರಾದ ಶ್ರೀ. ಉಮೇಶ ನಾಯ್ಕ ಎಸ್. ಜೆ. ಹಾಗೂ ಪ್ರಾಧ್ಯಾಪಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಕುಮಟಾ

hitendra naik
Exit mobile version