Follow Us On

WhatsApp Group
Focus NewsImportant
Trending

ಟೈಯರ್ ಸ್ಫೋಟಗೊಂಡು ರಸ್ತೆ ಡಾಂಬರಿಕರಣಕ್ಕೆ ಜೆಲ್ಲಿಕಲ್ಲು ಟಿಪ್ಪರ್‌ಗೆ ಬೆಂಕಿ: ಟಿಪ್ಪರ್ ಸಂಪೂರ್ಣ ಸುಟ್ಟು ಕರಕಲು

ಕುಮಟಾ: ಟೈಯರ್ ಸ್ಫೋಟಗೊಂಡು ರಸ್ತೆ ಡಾಂಬರಿಕರಣಕ್ಕೆ ಜೆಲ್ಲಿಕಲ್ಲು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಸಂಪೂರ್ಣ ಸುಟ್ಟು ಕರಕಲಾದ ಘಟನೆ ತಾಲ್ಲೂಕಿನ ಹುಲ್ದಾರ್ ಗದ್ದೆ ಬಳಿ ಮಂಗಳವಾರ ಸಂಜೆ ನಡೆದಿದೆ. ಸಿದ್ದಾಪುರದಿಂದ ಕುಮಟಾದ ಸಾಂತಗಲ್ ಬಳಿ ನಡೆಯುತ್ತಿರುವ ರಸ್ತೆ ಡಾಂಬರೀಕರಣಕ್ಕೆ ಜಲ್ಲಿಕಲ್ಲುಗಳನ್ನು ತುಂಬಿಕೊoಡು ಸಿದ್ದಾಪುರ- ಕುಮಟಾ ರಸ್ತೆಯ ದೊಡನೆ ಘಟ್ಟದಲ್ಲಿ ತೆರಳುವಾಗ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಬಳಿ ಟಯರ್ ಸ್ಫೋಟಗೊಂಡಿದೆ.

ತೂಗುಸೇತುವೆ ಮೇಲೆ ಕಾರು ಓಡಿಸಿಕೊಂಡು ಬಂದರು! ಆಕ್ರೋಶ ಹೊರಹಾಕಿ ವಾಪಸ್ ಕಳುಹಿಸಿದ ಗ್ರಾಮಸ್ಥರು

ಈ ವೇಳೆ ಬೆಂಕಿ ಹೊತ್ತಿಕೊಂಡಿದ್ದು, ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ. ಟೈಯರ್ ಸ್ಫೋಟಗೊಂಡು ಒಮ್ಮೆಲೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ನಂದಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್, ಕುಮಟಾ

Back to top button