ತೂಗುಸೇತುವೆ ಮೇಲೆ ಕಾರು ಓಡಿಸಿಕೊಂಡು ಬಂದರು! ಆಕ್ರೋಶ ಹೊರಹಾಕಿ ವಾಪಸ್ ಕಳುಹಿಸಿದ ಗ್ರಾಮಸ್ಥರು

ಕಾರವಾರ: ಗುಜರಾತಿ ಮೊರ್ಬಿ ತೂಗು ಸೇತುವೆ ದುರಂತ ಕಣ್ಣಮುಂದೆಯೇ ಇದ್ದು, ಇನ್ನು ಜನರು ಜಾಗೃತರಾಗಿಲ್ಲ. ಹೌದು, ಪ್ರವಾಸಿಗರು ತೂಗು ಸೇತುವೆ ಮೇಲೆ ಕಾರು ಚಲಾಯಿಸಿ, ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಯಲ್ಲಾಪುರ ಮತ್ತು ಜೋಯ್ಡಾ ತಾಲೂಕಿನ ಶಿವಪುರ ಗ್ರಾಮದ ಬಳಿ ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ತೂಗುಸೇತುವೆ ಮೇಲೆ ನಡೆದಿದೆ. ತೂಗು ಸೇತುವೆ ಮೇಲೆ ಅಪರಿಚಿತರು ಕಾರನ್ನು ಚಲಾಯಿಸಿಕೊಂಡು ಬಂದಿದ್ದನ್ನು ನೋಡಿದ ಸ್ಥಳೀಯರು ಇದಕ್ಕೆ ಆಕ್ಷೇಪಿಸಿದ್ದು, ಆದರೆ, ಇದಕ್ಕೆ ದರ್ಪ ತೋರಿದ್ದಾರೆ ಎನ್ನಲಾಗಿದೆ.

ರಸ್ತೆ ದಾಟುವ ವೇಳೆ ಡಿಕ್ಕಿಹೊಡೆದ ಸಾರಿಗೆ ಬಸ್ : ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಬಳಿಕ ಸ್ಥಳೀಯರೆಲ್ಲರೂ ಸೇರಿ ಕಾರನ್ನು ಬಂದ ಹಾದಿಯಲ್ಲೇ ರಿವರ್ಸ್ ಗೇರಿನಲ್ಲಿ ವಾಪಸ್ ಕಳುಹಿಸಿದ್ದಾರೆ. ತೂಗು ಸೇತುವೆ ನಿರ್ವಹಣೆ ಇಲ್ಲದೆ ಶಿಥಿಲವಾದ ಸಂದರ್ಭದಲ್ಲಿ ಸ್ಥಳೀಯರು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದು, ಬಳಿಕ ಸೇತುವೆಯ ನಿರ್ವಹಣೆಯನ್ನು ಮಾಡಲಾಗಿದೆ. ತೂಗು ಸೇತುವೆ ಮೇಲೆ ನಾಲ್ಕು ಚಕ್ರದ ವಾಹನಗಳ ಓಡಾಟ ಸರಿಯಲ್ಲ. ಅಹಾನುತವಾದರೆ ಯಾರು ಹೊಣೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Exit mobile version