Important
Trending

ನಮೋ ನೈವೇದ್ಯಕ್ಕೆ ಕರಿ ಇಖಾಡ ಮಾವಿನ ಹಣ್ಣು, ರವೆ ಪಾಯಸವಂತೆ : ಮೋದಿ ಊಟಕ್ಕೆ ಏನೇನು ವ್ಯವಸ್ಥೆ ಮಾಡಲಾಗಿದೆ ನೋಡಿ?

ಅಂಕೋಲಾ: ಅಂಕೋಲಾ ಎಂದರೆ ಕರಿ ಇಶಾಡು ಮಾವಿನ ಹಣ್ಣಿಗೆ ಪ್ರಸಿದ್ಧಿ . ಇತ್ತೀಚೆಗೆ ಈ ತಳಿಗೆ ಜಿಐ ಟ್ಯಾಗ್ ಮಾನ್ಯತೆಯೂ ದೊರೆತಿದ್ದು, ತಾಲೂಕಿಗೆ ಅಗಮಿಸಲಿರುವ ಪ್ರಧಾನಿ ಮೋದಿ ಇಲ್ಲಿ ಸೇವಿಸಲಿರುವ ಆಹಾರ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದೆ.

ಮೋದಿ ಊಟೋಪಚಾರದ ಕುರಿತು ಮಾಹಿತಿ ನೀಡಿದ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ, ದೇವಮಾನವ ಸ್ವರೂಪಿ ಹೆಮ್ಮೆಯ ಪ್ರಧಾನ ಮಂತ್ರಿಗಳು ನಮ್ಮ ಜಿಲ್ಲೆ ಹಾಗೂ ನನ್ನ ಕಾರವಾರ – ಅಂಕೋಲಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಅತ್ಯಂತ ಹೆಮ್ಮೆ ಹಾಗೂ ಸಂತೋಷದ ವಿಚಾರವಾಗಿದೆ. ಅವರ ಬರುವಿಕೆಗೆ ನಾವೆಲ್ಲ ಕಾದಿದ್ದೇವೆ. ಉಟೋಪಚಾರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಅವರ ಮೆನು ಹೊರತಾಗಿ ಸ್ಥಳೀಯ ಆಹಾರ ಪದ್ಧತಿಗೂ ವಿಶೇಷ ಒತ್ತು ನೀಡಿ, ಪ್ರಧಾನಿಯವರ ನ್ನು ಸತ್ಕರಿಸಲಾಗುವುದು.

ಈ ವೇಳೆ ನಮ್ಮ ಮಣ್ಣಿನ ಹಿರಿಮೆಯಂತಿರುವ ಕರಿ ಇಶಾಡ ಹಾಗೂ ಆಫೂಸ್ ಮಾವಿನ ಹಣ್ಣು ನೀಡಲಾಗುವುದು. ರವೆ ಪಾಯಸ, 2 ಬಗೆಯ ಸೊಪ್ಪಿನ ಪಲ್ಪ, ಚಪಾತಿ, ರೊಟ್ಟಿ ಮತ್ತಿತರ ಖಾದ್ಯ ಹಾಗೂ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಸಂಪ್ರದಾಯ ಬದ್ದ ಸನ್ಮಾನ ಗೌರವ, ಇತಗುಂಜಿ ಮಹಾಗಣಪನ ವಿಗ್ರಹ ಕಾಣಿಕೆ, ವಿಶೇಷ ಕಿರೀಟ ನೀಡಿ ಜಿಲ್ಲೆಯ ನೆನಪು ಚಿರಸ್ಥಾಯಿಯಾಗಿರುವುದು ನಮ್ಮ ಪಕ್ಷದ ಹಿರಿ-ಕಿರಿ ಮುಖಂಡರು,ಕಾರ್ಯಕರ್ತರು,ಹಾಗೂ ನಾಗರೀಕ ಬಂಧುಗಳು ಮತ್ತು ಮೋದಿ ಅಭಿಮಾನಿಗಳ ಆಶಯವಾಗಿದ್ದು, ಲಕ್ಷ ಲಕ್ಷ ಸಂಖ್ಯೆಯಲ್ಲಿ ಸಾರ್ವಜನಿಕ ಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ,ಕಾರ್ಯಕ್ರಮದ ಮೇಲುಸ್ತುವಾರಿ ವಹಿಸಿರುವ ಶಾಸಕಿ ರೂಪಾಲಿ ನಾಯ್ಕ ಕೋರಿಕೊಂಡಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button