Follow Us On

Google News
Important
Trending

ಮಧ್ಯರಾತ್ರಿಯ ವೇಳೆ ದನಗಳ್ಳರ ಕರಾಮತ್ತು: ಸಿಸಿಟಿವಿಯಲ್ಲಿ ಸೆರೆಯಾಗಿದೆ ಗೋಗಳ್ಳತನ ದೃಶ್ಯ

ಶಿರಸಿ: ನಗರದಲ್ಲಿ ದನಗಳ್ಳರು ಮತ್ತೆ ತಮ್ಮ ಕರಾಮತ್ತು ತೋರಲು ಪ್ರಾರಂಭಿಸಿದ್ದಾರೆ. ಮಧ್ಯ ರಾತ್ರಿಯ ವೇಳೆ ಗೊಗಳ್ಳತನದ ಕಾರ್ಯಾಚರಣೆ ಇದೀಗ ಅತಿಯಾಗುತ್ತಿದ್ದು, ಅದೇ ರೀತಿ ಶಿರಸಿಯಲ್ಲಿ ನಡೆದ ಗೋಗಳ್ಳತನದ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಿರಸಿಯ ನಿಲೇಕಣಿ ಗಣಪತಿ ದೇವಸ್ಥಾನದ ಬಳಿ ಮಲಗಿದ್ದ ಗೋವನ್ನು ಹಿಂಸಾತ್ಮಕವಾಗಿ ಕದ್ದೊಯ್ದಿದ್ದು, ಈ ದೃಶ್ಯ ಅಲ್ಲಿನ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಗರದಲ್ಲಿ ಗೋಗಳ್ಳತನ ದಿನೆ ದಿನೆ ಅತಿಯಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವೃ ಆಕ್ರೋಶ ಕೇಳಿಬಂದಿದೆ. ಸಂಬಂಧ ಪಟ್ಟ ಇಲಾಖೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ವಿಸ್ಮಯ ನ್ಯೂಸ್, ಶಿರಸಿ

Back to top button