ಚಂದ್ರಗ್ರಹಣ ಹಿನ್ನಲೆ: ದೇವಾಲಯದ ದರ್ಶನದ ಸಮಯ ಬದಲಾವಣೆ

ಗ್ರಹಣದ ಸ್ಪರ್ಶ ಮತ್ತು ಮೋಕ್ಷಕಾಲದ ಕುರಿತ ಮಾಹಿತಿ ಇಲ್ಲಿದೆ

ಕಾರವಾರ: ನವೆಂಬರ್ 8ರ ಮಂಗಳವಾರದ ಕಾರ್ತಿಕ ಪೂರ್ಣಿಮೆಯ ದಿನದಂದು ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಗ್ರಹಣವು ಭಾರತದ ಕೆಲವು ಭಾಗಗಳಲ್ಲಿ ಸಹ ಗೋಚರಿಸುತ್ತಿದ್ದು, ಚಂದ್ರಗ್ರಹಣದ ಆರಂಭ ಅಂದರೆ ಸ್ಪರ್ಶ ಕಾಲವು ನವೆಂಬರ್ 8ರಂದು ಮಧ್ಯಾಹ್ನ 2:39 ಕ್ಕೆ ಪ್ರಾರಂಭವಾಗುತ್ತದೆ. ಮಧ್ಯದ ಅವಧಿಯು ಸಂಜೆ 4:29ಕ್ಕೆ ಇರುತ್ತದೆ. ಮೋಕ್ಷ ಕಾಲ ಎಂದರೆ ಸಂಜೆ 6.19ಕ್ಕೆ ಗ್ರಹಣ ಮುಗಿಯುತ್ತದೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ದೇವಾಲಯದ ದರ್ಶನದ ಸಮಯದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ.

ಚಲನಚಿತ್ರ ಶೂಟಿಂಗಿಗೆ ಬಂದಿದ್ದವರ ಮೇಲೆ ಹೆಜ್ಜೇನು ದಾಳಿ: ಇಬ್ಬರು ಅಸ್ವಸ್ಥ

ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಮುಂಜಾನೆ 6 ಗಂಟೆಯಿoದ 9 ಗಂಟೆಯವರೆಗೆ ದೇವರ ಸ್ಪರ್ಶ ದರ್ಶನಕ್ಕೆ ಅವಕಾಶವಿದೆ. ಅಲ್ಲದೆ, ಮಧ್ಯಾಹ್ನ 2.30ರಿಂದ ಸಂಜೆ 6.30 ರವರೆಗೆ ಅಂದರೆ ಗ್ರಹಣ ಕಾಲದಲ್ಲಿ ಸಾರ್ವಜನಿಕರಿಗೆ ದೇವರ ಸ್ಪರ್ಶ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಮಂದಿರದ ವತಿಯಿಂದ ಮಧ್ಯಾಹ್ನ ಮತ್ತು ಸಂಜೆ ಭಕ್ತರಿಗೆ ನೀಡುವ ಉಚಿತ ಪ್ರಸಾದ ಭೋಜನವ್ಯವಸ್ಥೆಯಿರುವುದಿಲ್ಲ ಎಂದು ತಿಳಿಸಲಾಗಿದೆ.

ಇನ್ನು ವಿಶ್ವಪ್ರಸಿದ್ಧ ಮುರ್ಡೇಶ್ವರ ದೇವಾಲಯದಲ್ಲಿ ಶ್ರೀ ದೇವರಿಗೆ 9 ಘಂಟೆಯ ಒಳಗೆ ಮಧ್ಯಹ್ನದ ಪೂಜೆ ಕಾರ್ಯ ಸಹ ಮುಗಿಸಲಾಗುತ್ತದೆ. ಆದರೆ, ದಿನವಿಡೀ ಭಕ್ತರಿಗೆ ದೇವರ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಿರಸಿಯ ಮಾರಿಕಾಂಬಾ ದೇವಸ್ಥಾನದಲ್ಲೂ ಬೆಳಗ್ಗೆ 8 ಗಂಟೆಗೆ ಮಹಾಪೂಜೆ ನೆರವೇರಿಸಿದ್ದು, ನಂತರ 11 ಘಂಟೆ ವರೆಗೆ ಮಾತ್ರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 11 ಗಂಟೆಯ ನಂತರ ದೇವಸ್ಥಾನ ಬಂದ್ ಆಗಲಿದೆ. ಸಂಜೆ 6-30 ಕ್ಕೆ ದೇವಸ್ಥಾನದ ಬಾಗಿಲು ತೆರೆದು ಶುದ್ದಿ ಕಾರ್ಯ ಮಾಡಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version