Focus NewsImportant
Trending

ಉತ್ತರಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ವಿಷ್ಣುವರ್ಧನ್ ಅಧಿಕಾರ ಸ್ವೀಕಾರ

ಕಾರವಾರ: ಉತ್ತರಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸುಮನ್ ಪೆನ್ನೇಕರ್ ಅವರು ನೂತನ ಎಸ್‌ಪಿ ವಿಷ್ಣುವರ್ಧನ್ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ನೂತನ ಎಸ್‌ಪಿ ಯಾಗಿ ವಿಷ್ಣುವರ್ಧನ್ ಅವರು ಸೋಮವಾರದಿಂದಲೇ ಅಧಿಕಾರವಹಿಸಿಕೊಂಡಿದ್ದು, ಪೊಲೀಸ್ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಪೆನ್ನೇಕರ್ ಅವರು ಸಿಐಡಿ ವಿಭಾಗಕ್ಕೆ ಎಸ್ಪಿ ಆಗಿ ವರ್ಗಾವಣೆಗೊಂಡಿದ್ದು, ಅವರ ಸ್ಥಾನಕ್ಕೆ ವಿಷ್ಣುವರ್ಧನ್ ಅವರನ್ನು ಸರ್ಕಾರ ಕಳೆದ ವಾರ ನಿಯುಕ್ತಿಗೊಳಿಸಿತ್ತು.

ವಿಸ್ಮಯ ನ್ಯೂಸ್, ಕಾರವಾರ

Back to top button