Important
Trending

ಉತ್ತರಕನ್ನಡದಲ್ಲಿ ಇಂದು 61 ಮಂದಿಗೆ ಕರೊನಾ, 70 ಮಂದಿ ಗುಣಮುಖ

ಜಿಲ್ಲೆಯಲ್ಲಿ ಕರೊನಾಕ್ಕೆ ಮತ್ತೊಂದು ಬಲಿ
ಕುಮಟಾದಲ್ಲಿ ಇಂದು 9 ಕೇಸ್
ಅಂಕೋಲಾದಲ್ಲಿ ಮೂರು ಪ್ರಕರಣ‌ ದಾಖಲು

ಕಾರವಾರ: ಉತ್ತರಕನ್ನಡದಲ್ಲಿ ಇಂದು 61 ಕರೊನಾ ಕೇಸ್ ದಾಖಲಾಗಿದೆ.ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ ಭಟ್ಕಳ 15, ಕುಮಟಾ 9, ಅಂಕೋಲಾ 3, ಕಾರವಾರ 4, ಸಿದ್ದಾಪುರ 3, ಯಲ್ಲಾಪುರ 4, ಹಳಿಯಾಳ 6, ಜೋಯ್ಡಾದಲ್ಲಿ 7, ಮುಂಡಗೋಡಿನ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ಇದೇ ವೇಳೆ ಇಂದು 70 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾರದಲ್ಲಿ 15, ಭಟ್ಕಳ 12,ಹಳಿಯಾಳದಲ್ಲಿ 13, ಯಲ್ಲಾಪುರದಲ್ಲಿ 17, ಮುಂಡಗೋಡನಲ್ಲಿ 3, ಸಿದ್ದಾಪುರದಲ್ಲಿ ಓರ್ವ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 254 ಮಂದಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದೆಡೆ ಹಳಿಯಾಳದಲ್ಲಿ ಒಂದು ಸಾವಾಗಿದ್ದು, ಜಿಲ್ಲೆಯಲ್ಲಿ ಸಾವಿನ‌ ಸಂಖ್ಯೆ 39 ಕ್ಕೆ ಏರಿಕೆಯಾಗಿದೆ.

ಅಂಕೋಲಾದಲ್ಲಿ ಶನಿವಾರ ಕೇಸ್ 3 : ಸಕ್ರೀಯ 22

ಅಂಕೋಲಾ : ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳು ಸೇರಿ ತಾಲೂಕಾ ವ್ಯಾಪ್ತಿಯಲ್ಲಿ ಶನಿವಾರ 3 ಹೊಸ ಕರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿದೆ ಎನ್ನಲಾಗಿದ್ದು, ಆಯಾ ಗ್ರಾಮಗಳ ಈ ಹಿಂದಿನ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಬಂದಿರುವ ಸಾಧ್ಯತೆ ಕೇಳಿ ಬಂದಿದೆ.

  • ಇಂದು 18 ಜನರ ಗಂಟಲುದ್ರವದ ಪರೀಕ್ಷೆ
  • ಪ್ರಾಥಮಿಕ‌ ಸಂಪರ್ಕದಿಂದ‌ ಸೋಂಕು

ಈ ಮೂಲಕ ಒಟ್ಟು ಸಕ್ರೀಯ ಸೋಂಕಿನ ಪ್ರಕರಣಗಳ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಇಂದು 18 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Related Articles

Back to top button