Follow Us On

WhatsApp Group
Focus News
Trending

ರಕ್ತದಾನ ಮಾಡಿ ಜೀವ ಉಳಿಸಿ

ಜೂನ್ 14 ವಿಶ್ವ ರಕ್ತದಾನಿಗಳ ದಿನ
ಯಾರೆಲ್ಲ ರಕ್ತದಾನ ಮಾಡಬಹುದು?
ರಕ್ತದಾನ ಯಾರು ಮಾಡಬಾರದು?
ಈ ವಿಷಯ ನೀವು ತಿಳಿದಿರಬೇಕು

ಅಂಕೋಲಾ : ವಿಜ್ಞಾನ ತಂತ್ರಜ್ಞಾನಗಳಲ್ಲಿ, ವೈದ್ಯಕೀಯ ರಂಗದಲ್ಲಿ ನಡೆದ ಮಹತ್ತರ ಪ್ರಗತಿಗಳು, ಅಚ್ಚರಿ ಬೆಳವಣೆಗೆಗಳು ನಾನಾ ರೀತಿಯಲ್ಲಿ ಜನಜೀವನವನ್ನೇ ಬದಲಾಯಿಸಿಯಾದರೂ ಒಂದು ಜೀವದ ಉಳಿವಿಗೆ ಬೇಕಾದ “ರಕ್ತ” ಎನ್ನುವ ಜೀವಾಮೃತಕ್ಕೆ ಪರ್ಯಾಯವಾಗಿ ಈವರೆಗೂ ಕೃತಕ ರಕ್ತ ತಯಾರಿಸಲು ಸಾಧ್ಯವಾಗಿಲ್ಲ. ಆ ಕಾರಣಕ್ಕಾಗಿಯೇ ಏನೋ ವಿದ್ಯಾದಾನ, ಅನ್ನದಾನ, ನೇತ್ರದಾನಗಳಂತ ಮಹತ್ಕಾರ್ಯಗಳ ನಡುವೆ “ರಕ್ತದಾನವು” ತನ್ನದೇ ಆದ ಪವಿತ್ರತೆಯಿಂದ ಸರ್ವಶೇಷ್ಠ ದಾನವಾಗಿ ಗುರುತಿಸಿಕೊಂಡಿದೆ.
ರಕ್ತದಾನ : ಒಬ್ಬ ವ್ಯಕ್ತಿ ಸ್ವಇಚ್ಛೆಯಿಂದ ರಕ್ತ ನೀಡಲು ಸಿದ್ಧನಿದ್ದು, ತುರ್ತುಸಂದರ್ಭಗಳಲ್ಲಿ ಅದರ ಅವಶ್ಯಕತೆರುವ ವ್ಯಕ್ತಿಗೆ ನೀಡಿದಾಗ ರಕ್ತದಾನ ಪ್ರಕ್ರಿಯೆ ನಡೆಯುತ್ತದೆ. ಅಂತಹ ರಕ್ತವನ್ನು ರಕ್ತ ವರ್ಗಾವಣೆಗೆ ಬಳಸಲಾಗುತ್ತದೆ ಅಥವಾ ವಿಭಾಗೀಕರಣ ಎನ್ನುವ ಪ್ರಕ್ರಿಯೆ ಮೂಲಕ ಔಷಧಿ ತಯಾರಿಕೆಗೆ ಬಳಸಲಾಗುತ್ತದೆ.
ಹಲವೆಡೆ ರಕ್ತದಾನಿಗಳು ಹಣ ತೆಗೆದುಕೊಳ್ಳದೇ ಸ್ವಇಚ್ಛೆಯಿಂದ ಯಾರಿಗಾದರೂ ತನ್ನ ರಕ್ತದಿಂದ ಸಹಾಯವಾಗಲಿ ಎನ್ನುವ ಉದ್ದೇಶದಿಂದ ರಕ್ತದಾನ ಮಾಡುತ್ತಾರೆ. ಇನ್ನು ಕೆಲವೆಡೆ ತಮ್ಮ ಕುಟುಂಬ ಅಥವಾ ಸ್ನೇಹಿತರಿಗೆ ರಕ್ತ ವರ್ಗಾವಣೆ ಅವಶ್ಯವಿದ್ದಾಗ ಮಾತ್ರ ರಕ್ತದಾನ ಮಾಡುತ್ತಾರೆ.

ಯಾರೆಲ್ಲಾ ರಕ್ತದಾನ ಮಾಡಬಹುದು

ಆರೋಗ್ಯವಂತ ವ್ಯಕ್ತಿಯಲ್ಲಿ ಸರಿಸುಮಾರು 5 ಲೀಟರ್ ರಕ್ತ ಹರಿಯುತ್ತಿದ್ದು, ಒಮ್ಮೆ ರಕ್ತದಾನ ಮಾಡಿದಾಗ ಆ ರಕ್ತದಾನದ ಪ್ರಮಾಣ ಕೇವಲ 200 ಮಿ.ಮೀ.ಗಳಿಂದ 550 ಮಿ.ಮೀ.ಗಳವರೆಗೆ ಆಧಾರಿತವಾಗಿರುತ್ತದೆ. ರಕ್ತದಾನದ ನಂತರ ಕೆಲವೇ ದಿನಗಳಲ್ಲಿ ರಕ್ತ ಮರುಪೂರ್ಣಗೊಳ್ಳುತ್ತದೆ. ಹೊಸ ರಕ್ತಕಣಗಳು ಉತ್ಪತ್ತಿಯಾಗುವುದರಿಂದ ರಕ್ತದಾನಿಗೆ ಚೈತನ್ಯವೂ ಬರುತ್ತದೆ. ಹಾಗೂ ರಕ್ತದಲ್ಲಿರುವ ಹಾನಿಕಾರಕ ಕೊಲೆಸ್ಟ್ರಾಲ್ ಕಡಿಮೆಯಾಗಿ ರಕ್ತದಾನಿಯ ಆರೋಗ್ಯವೃದ್ಧಿಗೂ ಕಾರಣವಾಗುತ್ತದೆ.

ಯಾರೆಲ್ಲ ರಕ್ತದಾನ ಮಾಡಬಾರದು

ಅಪ್ರಾಪ್ತ ವಯಸ್ಕರು, 50 ಕೆ.ಜಿ.ಗಿಂತ ಕಡಿಮೆ ತೂಕ ಹೊಂದಿರುವವರು, ಗರ್ಭೀಣಿ ಸ್ತ್ರೀಯರು, ಋತುಸ್ರಾವದ ಸಮಯದಲ್ಲಿರುವ ಮಹಿಳೆಯರು, ಅನಾರೋಗ್ಯ ಪೀಡಿತರು, ಸಾರಾಯಿ ಸೇವನೆ ಮಾಡಿದವರು, ಹೆಚ್ಚಿನ ರಕ್ತದೊತ್ತಡವಿರುವವರು, ವಿಷಕಾರಕ ಔಷಧಿ ಸೇವನೆ ಮಾಡುತ್ತಿರುವವರು, ಹೆಚ್‌ಐವಿ ಪೀಡಿತರು, ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿರುವವರು, ಅಶಕ್ತರು ಮತ್ತು ರಕ್ತದಲ್ಲಿ ಹಿಮೋಗ್ಲೋಬಿನ್ ಕೊರತೆ ಇರುವವರು ರಕ್ತದಾನ ಮಾಡಬಾರದು ಈ ಮೇಲಿನ ಸಂದರ್ಭಗಳಲ್ಲಿ ರಕ್ತದಾನ ಮಾಡುವುದರಿಂದ ರಕ್ತದಾನಿ ಹಾಗೂ ರಕ್ತ ಪಡೆದವರಿಗೂ ಅಪಾಯವೇ ಹೆಚ್ಚು.

ರಕ್ತದ ಗುಂಪುಗಳು : ಮನುಷ್ಯನ ರಕ್ತವನ್ನು ಸಾಮಾನ್ಯವಾಗಿ A, B, AB, O, ಎಂಬುದಾಗಿ ವಿಂಗಡಿಸಲಾಗುತ್ತದೆ. ರಕ್ತದಲ್ಲಿರುವ ಕೆಂಪು ರಕ್ತಕಣಗಳ ಮೇಲಿರುವ ಆಂಟಿಜಿನ್ ಅಂಶಗಳನ್ನು ನೋಡಿ ವಿಂಗಡಿಸಲಾಗುತ್ತದೆ. ಆಂಟಿಜಿನ್ ಜೊತೆಗೆ rh ಆಂಟಿಜಿನ್ ಆಧಾರ ಮೇಲೆ A+ve, A-ve, B+ve, B-ve, AB+ve, AB-ve, O+ve, O-ve,ಎಂಬುದಾಗಿ ವಿಂಗಡಿಸಲಾಗುತ್ತದೆ. ಸಾಮಾನ್ಯವಾಗಿ A+ve ಮತ್ತು O+ve ಗುಂಪುಗಳು ಹೆಚ್ಚಿನ ಜನರಲ್ಲಿ ಕಾಣಸಿಗುತ್ತದೆ.. B-ve ಮತ್ತು O-veಮುಂತಾದ ರಕ್ತದ ಗುಂಪುಗಳು ಬಹಳ ವಿರಳ. ಆದ್ದರಿಂದ ಇಂತಹ ವ್ಯಕ್ತಿಗಳಿಗೆ ರಕ್ತವನ್ನು ಸಂಗ್ರಹಿಸಿ ನೀಡುವುದು ಕಷ್ಟದ ಕೆಲಸ.

  1. AB ರಕ್ತದ ಗುಂಪು ಇರುವವರಲ್ಲಿ ಯಾವುದೇ ಆಂಟಿಬಾಡಿ ಇಲ್ಲದ ಕಾರಣ AB ರಕ್ತದ ಗುಂಪಿನವರು A,B, AB ಮತ್ತು O ರಕ್ತದ ಗುಂಪಿನವರ ರಕ್ತ ಪಡೆಯಬಹುದು. ಆ ಕಾರಣಕ್ಕಾಗಿಯೇ AB+ve’ ರಕ್ತ ಗುಂಪನ್ನು ‘ಯುನಿರ್ವಸಲ್ ರಿಸೀವರ್’ ಎಂದು ಹೇಳುತ್ತಾರೆ.
  2. ‘‘O’ಗುಂಪಿನ ರಕ್ತದಲ್ಲಿ ಯಾವುದೇ ಆಂಟಿಜಿನ್ ಇಲ್ಲದ ಕಾರಣ‘O’ ಗುಂಪಿನ ರಕ್ತವನ್ನು A,B, AB ಮತ್ತು O ಗುಂಪಿನವರಿಗೆ ತುರ್ತುಪರಿಸ್ಥಿತಿಗಳಲ್ಲಿ ನೀಡಬಹುದು.
  3. ಅದಕ್ಕಾಗಿಯೇ O-ve ರಕ್ತದಾನಿಗಳನ್ನು ‘ಯುನಿವರ್ಸಲ್ ಡೊನರ್’ ಎಂದು ಕರೆಯಲಾಗುತ್ತದೆ.

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ರಕ್ತದ ಗುಂಪನ್ನು ತಿಳಿದಿರಬೇಕು. ಅಪಘಾತ ಅಥವಾ ತುರ್ತುಪರಿಸ್ಥಿತಿಗಳಲ್ಲಿ ರಕ್ತದ ಗುಂಪು ತಿಳಿಯದೇ ಇದ್ದಲ್ಲಿ ರಕ್ತದ ಅವಶ್ಯಕತೆ ಒದಗಿ ಬಂದಲ್ಲಿ ಕಷ್ಟವಾಗುವುದು. ಆದ್ದರಿಂದ ತನ್ನ ಜೀವದ ಉಳಿವಿಗಾಗಿ ಮತ್ತು ಇತರ ಜೀವಗಳನ್ನು ಉಳಿಸಲು ಸಾಧ್ಯವಾದಷ್ಟು ರಕ್ತದಾನದ ಕುರಿತು ಜಾಗೃತರಾಗಿರಬೇಕೆಂಬುದು ವಿಶ್ವ ರಕ್ತದಾನಿಗಳ ದಿವಸದ ಸಂದೇಶ.
ಅಂಕೋಲಾದಲ್ಲಿ ವಿವಿಧ ಸಂಘಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತರನೇಕರು ರಕ್ತದಾನ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆಯ ಸಹಕಾರದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಕೋವಿಡ್-19 ಕೊರೋನಾ ವೈರಸ್ ಸೋಂಕಿತ ವ್ಯಕ್ತಿಗಳಿಗೆ ‘ಪ್ಲಾಸ್ಮಾ ಥೆರಪಿ’ ಬಗ್ಗೆ ಆಧುನಿಕ ವೈಧ್ಯಕೀಯ ಲೋಕದಲ್ಲಿ ಹೊಸ ಚಿಂತನೆ ಮತ್ತು ಪ್ರಯೋಗ ನಡೆಯುತ್ತಿದ್ದು ರಕ್ತದಾನದ ಮಹತ್ವ ಸಾರಿ ಹೇಳುತ್ತಿದೆ. ತುರ್ತು ಸಂದರ್ಭಗಳಲ್ಲಿ ರಕ್ತದಾನದ ತೀವೃ ಅವಶ್ಯಕತೆ ಕಂಡು ಬರುತ್ತಿದೆ. ಯುವಜನರು ಹೆಚ್ಚು ಹೆಚ್ಚಾಗಿ ರಕ್ತದಾನದಲ್ಲಿ ಪಾಲ್ಗೊಳ್ಳಬೇಕು. ಮತ್ತು ಇತರರಿಗೂ ರಕ್ತದಾನ ಮಹತ್ವ ತಿಳಿಹೇಳಬೇಕು.
-ಚಿನ್ನದಗರಿ ಯುವಕ ಸಂಘ, ಲಕ್ಷ್ಮೇಶ್ವರ. ಅಂಕೋಲಾ- (ಉ.ಕ)

– ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

[sliders_pack id=”1487″]

Back to top button