Important
Trending

ಹೊನ್ನಾವರದ ನಾಲ್ವರಲ್ಲಿ ಕರೊನಾ

ಹೊನ್ನಾವರ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಹಲವು ದಿನಗಳ ಬಿಡುವಿನ ಬಳಿಕ ಮತ್ತೆ ಕರೊನಾ ಕಾಣಿಸಿಕೊಂಡಿದೆ. ಒಂದೇ ಕುಟುಂಬದ ನಾಲ್ವರಿಗೆ ಕರೋನಾ ಪಾಸಿಟಿವ್ ಬಂದಿದೆ ಎಂಬ ಮಾಹಿತಿ ಬಂದಿದೆ. ಇವರೆಲ್ಲ ಜೂನ್ ನಾಲ್ಕರಂದು ಮುಂಬೈನಿಂದ ಹೊನ್ನಾವರಕ್ಕೆ ಆಗಮಿಸಿದ್ದರು. ಸರ್ಕಾರದ ಆದೇಶ ದಂತೆ ಏಳು ದಿನಗಳ ಖಾಸಗಿ ಹೋಟೆಲ್‌ನಲ್ಲಿ ಕ್ವಾರಂಟೈನ್ ಮುಗಿಸಿ ಜೂನ್ 11 ರಂದು ಮನೆಗೆ ಹೋಗಿದ್ದರು. ಮನೆಗೆ ಹೋಗುವ ಸಂದರ್ಭದಲ್ಲಿ ಗಂಟಲು ದ್ರವದ ಮಾದರಿಯನ್ನು ಟಸ್ಟ್ಗೆ ಕಳುಹಿಸಲಾಗಿತ್ತು. ಈಗ ಇವರ ವರದಿ ಬಂದಿದ್ದು, ಇದರ ವರದಿ ಪಾಸಿಟಿವ್ ಬಂದಿದೆ. ಪಾಸಿಟಿವ್ ಬಂದವರೆಲ್ಲ ಮನೆಗೆ ತೆರಳಿದ್ದರಿಂದ ಅವರ ಸಂಪರ್ಕಕ್ಕೆ ಬಂದ ಮನೆಯವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಮತ್ತು ಪಾಸಿಟಿವ್ ಬಂದವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ. – ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ ಹೊನ್ನಾವರ

[sliders_pack id=”1487″]

Back to top button