Follow Us On

Google News
Important

ನಿದ್ದೆ ಮಂಪರಿನಲ್ಲಿ ಅವಾಂತರ: ರಸ್ತೆ ಪಕ್ಕದ ಕಾಲುವೆಗೆ ಉರುಳಿದ ಕಾರು

ಅಂಕೋಲಾ: ನಿದ್ದೆ ಮಂಪರಿನಲ್ಲಿದ್ದ ಎನ್ನಲಾದ ಕಾರ್ ಚಾಲಕ, ವಾಹನದ ಮೇಲಿನ ತನ್ನ ನಿಯಂತ್ರಣವನ್ನು ಕಳೆದುಕೊಂಡಿದ್ದರಿಂದ,ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರು, ಡಿವೈಡರ್ ಹತ್ತಿ, ನೀರು ಹರಿದು ಹೋಗಲು ನಿರ್ಮಿಸಿದ ಕಾಂಕ್ರೀಟ್ ಕಾಲುವೆಯಲ್ಲಿ ಸಿಲುಕಿಕೊಂಡ ಘಟನೆ ಸಂಭವಿಸಿದೆ . ಚಲಿಸುತ್ತಿದ್ದ ಕಾರೊಂದು, ಚಾಲಕನ ನಿಯಂತ್ರಣ ಕಳೆದುಕೊಂಡು, ಒಂದು ಬದಿಯ ಹೆದ್ದಾರಿ ಡಿವೈಡರ್ ದಾಟಿ,ಎರಡು ಕಡೆ ಡಿವೈಡರ್ ಮಧ್ಯೆ ನೀರು ಹರಿದು ಹೋಗಲು ನಿರ್ಮಿಸಲಾದ ಕಾಂಕ್ರೀಟ್ ಕಾಲುವೆಯಲ್ಲಿ ಸಿಲುಕಿಕೊಂಡ ಘಟನೆ ಅಂಕೋಲಾ ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೇ 10 ರ ಶುಕ್ರವಾರ ಮಲ್ಯಾಹ್ನದ ವೇಳೆ ಸಂಭವಿಸಿದೆ.

KL 57 Q 447 ನೊಂದಣಿ ಸಂಖ್ಯೆ ಇರುವ ಇಕೋ ಸ್ಪೋಟ್ಸ್ ವಾಹನ, ಗೋವಾದಿಂದ ಕೇರಳಕ್ಕೆ ಚಲಿಸುತ್ತಿರಬೇಕಾದರೆ ದಾರಿ ಮಧ್ಯೆ ಅಂಕೋಲಾದ ಕೋಟೆವಾಡ, ಹುಲಿದೇವರ ವಾಡಾ ಹಾಗೂ ಪುರಲಕ್ಕಿ ಬೇಣದ ಗಡಿ ಪ್ರದೇಶ ವ್ಯಾಪ್ತಿಯ ರಾಷ್ರೀಯ ಹೆದ್ದಾರಿಯಲ್ಲಿ ಈ ರಸ್ತೆ ಅವಘಡ ಸಂಭವಿಸಿದೆ. ಚಾಲಕ ನಿದ್ದೆ ಮಂಪರಿನಲ್ಲಿ ಇದ್ದ ಎನ್ನಲಾಗಿದ್ದು,ಈ ಆಕಸ್ಮಿಕ ಘಟನೆಯಿಂದ,ಚಾಲಕನ ನಿಯಂತ್ರಣ ತಪ್ಪಿದ ಕಾರು ಒಂದು ಬದಿಯ ಹೆದ್ದಾರಿ ಡಿವೈಡರ್ ದಾಟಿ, ಅದರ ಚಕ್ರ,ಸಿಮೆಂಟ್ ಕಾಲುವೆ ಒಳಗೆ ಸಿಲುಕಿ, ಮೂತಿ ಮಗ್ಗುಲಾಗಿದೆ. ಈ ಕಾರಿನಲ್ಲಿ ಇಬ್ಬರು ಪುಟಾಣಿಗಳು, ಮತ್ತಿಬ್ಬರು ಹಾಗೂ ಒರ್ವ ಚಾಲಕ ಸೇರಿ ಒಟ್ಟು ಐದು ಜನರು ಇದ್ದರು ಎನ್ನಲಾಗಿದ್ದು,ಅದೃಷ್ಟ ವಶಾತ್ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.

ಸುದ್ದಿ ತಿಳಿದ 112 ತುರ್ತು ವಾಹನ ಸಿಬ್ಬಂದಿಗಳು,ಎನ್ ಎಚ್ ಎ ಐ ಹೆದ್ದಾರಿ ಸುರಕ್ಷತಾ ಸಿಬ್ಬಂದಿಗಳು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ,ಅಪಘಾತ ಗೊಂಡ ವಾಹನವನ್ನು ಕ್ರೇನ್ ಮೂಲಕ ಮೇಲೆತ್ತಿ,ಕರ್ತವ್ಯ ನಿರ್ವಹಿಸಿದರು.ಘಟನೆಯ ಕುರಿತಂತೆ ಹೆಚ್ಚಿನ ಮತ್ತು ನಿಖರ ಮಾಹಿತಿಗಳು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button