ಮಾಹಿತಿ
Trending

ಭಟ್ಕಳಿಗರ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದ ಮಂಕಿಯ ‘ಸಂತೋಷ ಮತ್ತು ಸುಮಾ’

ಭಟ್ಕಳ: ದುಬೈಯಲ್ಲಿ ಕೆಲಸ ಮಾಡಿಕೊಂಡಿದ್ದ ಹೊನ್ನಾವರ ತಾಲೂಕಿನ ಮಂಕಿಯ ನಿವಾಸಿ ಸಂತೋಷ ಮತ್ತು ಅವರ ಸಹೋದರಿ ಸುಮಾ ಭಟ್ಕಳಕ್ಕೆ ಸುರಕ್ಷಿತವಾಗಿ ತಲುಪಿದ್ದು ಅವರು ಭಟ್ಕಳಿಗರ ಪ್ರಯತ್ನಕ್ಕೆ ಕೃತಜ್ಞೆತೆರ‍್ಪಿಸಿದ್ದಾರೆ. ಈ ಕುರಿತಂತೆ ದುಬೈಯ ರಾಸ್-ಅಲ್-ಖೈಮಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಂತೋಷ್, ನಾನು ಬಹಳ ದಿನಗಳಿಂದ ದುಬೈಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಜೊತೆ ನನ್ನ ತಂಗಿಯೂ ಇದ್ದಾಳೆ ಅವಳ ಮದುವೆ ದಿನಾಂಕ ಫಿಕ್ಸ್ ಆಗಿದ್ದು ಊರಿಗೆ ಹೋಗಲು ಪ್ರಯತ್ನಿಸುತ್ತಿದ್ದಾಗ ಭಟ್ಕಳದವರು ನಮಗೆ ತುಂಬಾ ಸಹಾಯ ಮಾಡಿದ್ದಾರೆ ನಮಗೆ ವಿಮಾನದಲ್ಲಿ ಟಿಕೆಟ್ ಕೊಟ್ಟಿದ್ದಲ್ಲದೆ ನಮಗೆ ವಿಮಾನ ನಿಲ್ದಾಣದ ವರೆಗೆ ಕರೆದುಕೊಂಡು ಬಂದು ಇಲ್ಲಿ ಊಟ ನೀಡಿ ಉಪಚರಿಸಿದ್ದಾರೆ. ಇದಕ್ಕಾಗಿ ನಾವು ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ನಾನು ಟಿಕೆಟ್ ಪಡೆಯಲು ಅವರ ಕಚೇರಿಗೆ ಹೋದಾಗ ಅವರು ನನ್ನನ್ನು ತಮ್ಮ ಮನೆಯವರಂತೆ ಉಪಚರಿಸಿದರು. ಇಲ್ಲಿನ ನನ್ನವರೂ ಇದ್ದಾರೆ ಎನ್ನುವ ಭಾವನೆ ನನ್ನಲ್ಲಿ ಮೂಡಿತು. ನನ್ನ ಮದುವೆ ಇರುವ ಕಾರಣ ನಾನು ಊರಿಗೆ ಹೋಗುತ್ತಿದ್ದೇನೆ. ಭಟ್ಕಳದ ಜನ ನಮಗೆ ತುಂಬಾ ಸಹಾಯ ಮಾಡಿದ್ದಾರೆ ನನಗೆ ಇಮ್ಮಡಿ ಸಂತೋಷವಾಗುತ್ತಿದೆ.
-ಸುಮಾ, ಸಂತೋಷ್ ಅವರ ಸಹೋದರಿ

-ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

[sliders_pack id=”1487″]

Back to top button