Focus News
Trending

ಉತ್ತರ ಕನ್ನಡದಲ್ಲಿ ಇಂದು 175 ಕೇಸ್: 409 ಮಂದಿ ಗುಣಮುಖ

409 ಮಂದಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆ
ಜಿಲ್ಲೆಯಲ್ಲಿ 175 ಕೇಸ್ ದಾಖಲು
ನೂರರ ಗಡಿ ದಾಟಿದ ಮೃತರ ಸಂಖ್ಯೆ
ಅoಕೋಲಾದಲ್ಲಿ 10, ಯಲ್ಲಾಪುರದಲ್ಲಿ 3 ಪಾಸಿಟಿವ್

[sliders_pack id=”1487″]

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 175 ಕರೊನಾ ಕೇಸ್ ದಾಖಲಾಗಿದೆ. ಕಾರವಾರ 28, ಅಂಕೋಲಾ 5, ಕುಮಟಾ 32, ಹೊನ್ನಾವರ 18, ಭಟ್ಕಳ 18, ಶಿರಸಿ 24, ಸಿದ್ದಾಪುರ 8, ಯಲ್ಲಾಪುರ 15, ಸೇರಿ ಇಂದು ಒಟ್ಟು 175 ಕೇಸ್ ದಾಖಲಾಗಿದೆ.

ಇದೇ ವೇಳೆ ಇಂದು ವಿವಿಧ ಆಸ್ಪತ್ರೆಯಿಂದ 409 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾರ 75, ಅಂಕೋಲಾ 4, ಕುಮಟಾ 52, ಹೊನ್ನಾವರದಲ್ಲಿ 5, ಭಟ್ಕಳ 20, ಶಿರಸಿ 1, ಯಲ್ಲಾಪುರ 120, ಮುಂಡಗೋಡ 74, ಹಳಿಯಾಳದಲ್ಲಿ 58 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಯಲ್ಲಾಪುರದಲ್ಲಿ ಅತಿಹೆಚ್ಚು ಅಂದರೆ 120 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ಜಿಲ್ಲೆಯಲ್ಲಿ ಆರು ಸಾವು: ಮೃತರ ಸಂಖ್ಯೆ 100ಕ್ಕೆ ಏರಿಕೆ

ಇದೇ ವೇಳೆ, ಜಿಲ್ಲೆಯಲ್ಲಿ ಇಂದು ಆರು ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 101ಕ್ಕೆ ಏರಿಕೆಯಾಗಿದೆ. ಕಾರವಾರ 2, ಭಟ್ಕಳ 2, ಸಿದ್ದಾಪುರ 1 ಮತ್ತು ಹೊನ್ನಾವರದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಈವರೆಗೆ ಜಿಲ್ಲೆಯ 8110 ಮಂದಿಯಲ್ಲಿ ಸೋಂಕು ದೃಢವಾಗಿದ್ದು, 5,872 ಮಂದಿ ಗುಣಮುಖರಾಗಿದ್ದಾರೆ. 1030 ಮಂದಿ ಆಸ್ಪತ್ರೆಗಳಲ್ಲಿ, 1117 ಮಂದಿ ಹೋಂ ಐಸೋಲೇಶನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಂಕೋಲಾದಲ್ಲಿ 10 ಹೊಸ ಕೇಸ್:

ಅಂಕೋಲಾ: ತಾಲೂಕಿನಲ್ಲಿ ಇಂದು 10 ಕರೊನಾ ಪ್ರಕರಣ ದೃಢಪಟ್ಟಿದೆ. ತಾಲೂಕಿನ ಅಂಬರವಾಡ, ಅವರ್ಸಾ, ಹುಲಿದೇವರವಾಡ, ಮತ್ತು ಪಟ್ಟಣ ವ್ಯಾಪ್ತಿಯಲ್ಲಿ ಸೋಂಕು ಕಂಡುಬoದಿದೆ. 49 ಮಂದಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 94 ಸಕ್ರೀಯ ಪ್ರಕರಣಗಳಿವೆ.

ಯಲ್ಲಾಪುರದಲ್ಲಿಂದು ಮೂವರಿಗೆ ಪಾಸಿಟಿವ್

ಯಲ್ಲಾಪುರ: ನಗರದಲ್ಲಿ ಇಂದು ಮೂರು ಜನರಿಗೆ ಕೊರೊನಾ ಸೋಂಕು ಧೃಢಪಟ್ಟಿದ್ದು, ತಾಲೂಕಿನಲ್ಲಿ ಒಟ್ಟೂ ಸೋಖಿತರ ಸಂಖ್ಯೆ 529 ಕ್ಕೆ ಏರಿಕೆಯಾಗಿದೆ. ಗೋಪಾಲಕೃಷ್ಣಗಲ್ಲಿಯ ಇಬ್ಬರು ಹಾಗೂ ಕಾಳಮ್ಮನಗರದ ಒಬ್ಬರಿಗೆ ಸೋಂಕು ತಗುಲಿದೆ.


ವಿಸ್ಮಯ ನ್ಯೂಸ್, ವಿಲಾಸ ನಾಯಕ ಅಂಕೋಲಾ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button