Important
Trending

ಕರೊನಾ ದೃಢಪಟ್ಟಿದ್ದ ಶಾಸಕ ಸುನೀಲ್ ನಾಯ್ಕ ಆರೋಗ್ಯದಲ್ಲಿ ವ್ಯತ್ಯಯ:ಮಣಿಪಾಲ‌ ಆಸ್ಪತ್ರೆಗೆ ದಾಖಲು

  • ವೈದ್ಯರ ಸಲಹೆ ಮೆರೆಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾದ ಶಾಸಕ ಸುನೀಲ ನಾಯ್ಕ
  • ತೀವ್ರ ಜ್ವರ, ತಲೇನೋವು

ಭಟ್ಕಳ : ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಗುರುವಾರದಂದು ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆ ತಾಲೂಕಾಸ್ಪತ್ರೆಯ ಕೋವಿಡ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಸಕ‌ ಸುನೀಲ್ ನಾಯ್ಕ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ.

ಈ ಹಿನ್ನೆಯಲ್ಲಿ ವೈದ್ಯರ ಸಲಹೆ ಮೇರೆಗೆ ಮಣಿಪಾಲದ ಕಸ್ತೂರಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಆಸ್ಪತ್ರೆಗೆ ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ, ತೀವ್ರತರ ಜ್ವರ, ತಲೆನೋವು ಇದ್ದು, ದೇಹದ ಆಮ್ಲಜನಕದ ಪ್ರಮಾಣ ಪ್ರಮಾಣ ಕಡಿಮೆಯಾಗಿತ್ತು ಎನ್ನಲಾಗಿದೆ.

ಕಾರವಾರದಿಂದ ಬಂದಿದ್ದ ವೈದ್ಯರು ಸುನೀಲ್‌ ನಾಯ್ಕ ಗರ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಆರೋಗ್ಯದಲ್ಲಿ ಯಾವುದೇ ಚೇತರಿಕೆ‌ ಕಾಣದ ಕಾರಣ ನಿನ್ನೆ ರಾತ್ರಿ ಅವರನ್ನು ಮಣಿಪಾಲದ ಕಸ್ತೂರಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Back to top button