Important
Trending

ಆಕಸ್ಮಿಕ ಬೆಂಕಿ ಅವಘಡ: ಹೊತ್ತಿ ಉರಿದ ಮನೆ : ಸುಟ್ಟು ಕರಕಲಾದ ವಸ್ತುಗಳು : ಲಕ್ಷಾಂತರ ಹಾನಿ

ಅಂಕೋಲಾ : ಮನೆಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತುಕೊಂಡ ಘಟನೆ ಪಟ್ಟಣದ ವಾಜಂತ್ರಿ ಕೇರಿಯಲ್ಲಿ ನಡೆದಿದೆ. ಗೋಪಿನಾಥ ಮಹಾಲೆಯವರಿಗೆ ಸೇರಿದ  ಹಳೆಯ ಮನೆಯನ್ನು ಬಾಡಿಗೆ ನೀಡಲಾಗಿತ್ತು. ಈ ಮನೆಯಲ್ಲಿ ಬಸ್ಟಾಂಡ್ ಪಕ್ಕ ಹೇರ್ ಸಲೂನ್ ನಡೆಸುವ ಚಂದು ಎನ್ನುವರ ಕುಟುಂಬ ವಾಸವಾಗಿತ್ತು ಎನ್ನಲಾಗಿದ್ದು,ಕುಟುಂಬಸ್ಥರಾರು ಈ ಮನೆಯಲ್ಲಿ ಇಲ್ಲದೇ ಹೊರಗೆ ಇದ್ದ ವೇಳೆ ರಾತ್ರಿ 8 ರ ಸುಮಾರಿಗೆ ಮನೆಯೊಳಗಿಂದ ಭಾರೀ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿದೆ.

ಅಕ್ರಮವಾಗಿ ಮರಗಳನ್ನು ಕಡಿದು ಸಾಗಾಟ: ಆರೋಪಿಗಳ ಬಂಧನ

ಕೂಡಲೇ ಸುತ್ತಮುತ್ತಲಿನ ಕೆಲ ಯುವಕರು ಮನೆಯ ಬಾಗಿಲ ಒಡೆದು ಮನೆಯೊಳಗಿನ ಗ್ಯಾಸ್ ಸಿಲಿಂಡರಗಳನ್ನು ಹೊರ ಸಾಗಿಸಿ,ಅಕ್ಕ ಪಕ್ಕದ ಹತ್ತಾರು ಮನೆಗಳಿಗೆ ಆಗಬಹುದಿದ್ದ ( ಸಂಭವನೀಯ) ಭಾರೀ ಅನಾಹುತ ತಪ್ಪಿಸಿದ್ದಾರೆ.. ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿಲು  ಹರಸಾಹಸ ಪಟ್ಟರು. ಈ ವೇಳೆಗಾಗಲೀ ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ಟಿವಿ ಸ್ಟ್ಯಾಂಡ್, ಪ್ರಿಜ್, ಗ್ರ್ಯಾಂಡರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ಸ್ ವಸ್ತುಗಳು,ಬಟ್ಟೆ ಪೀಠೋಪಕರಣ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ.

ಗೋದ್ರೆಜ್ ಕಪಾಟ್ ಹಾಗೂ ಕಬೋರ್ಡ್ನಲ್ಲಿದ್ದ ಬೆಲೆಬಾಳುವ ವಸ್ತುಗಳು,ಅಮೂಲ್ಯ ಕಾಗದ ಪತ್ರಗಳು ಬೆಂಕಿಗೆ ಆಗುತಿಯಾಗಿದ್ದು, ದಟ್ಟ ಹೊಗೆಯ ನಡುವೆಯೂ ಮನೆಯವರು ಕೊನೆಯ ಆಸೆಯಿಂದ ಯಾವುದಾದರೂ ವಸ್ತುಗಳು ಉಳಿದಿರಬಹುದೇ ಎಂದು ಹುಡುಕಾಡುತ್ತಿರುವ ದೃಶ್ಯ ಕರಳು ಚುರ್ ಎನ್ನುವಂತಿತ್ತು. ಪಿ ಎ ಸೈ ಮಹಾಂತೇಶ ವಾಲ್ಮೀಕಿ ಹಾಗೂ  ಸಿಬ್ಬಂದಿಗಳು ಸ್ಥಳ ಪರಿಶೀಲಿಸಿದರು.ಅಗ್ನಿ ಶಮನಕ್ಕೆ ಸಂಬಂಧಿಸಿದ ಇಲಾಖೆಗಳ ಜೊತೆ ಸ್ಥಳೀಯರು ಸಹಕರಿಸಿದರು.ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಅವಘಡ ಸಂಭವಿಸಿರುವ ಸಾಧ್ಯತೆಯಿದ್ದು,ನಿಖರ ಕಾರಣ ಮತ್ತು ಹಾನಿಯ ಅಂದಾಜು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button