ಗೋಕರ್ಣ: ಶ್ರೀ ಕ್ಷೇತ್ರಗೋಕರ್ಣ ಪುರಾಣ ಪ್ರಸಿದ್ಧ ಸ್ಥಳ. ಪ್ರತಿದಿನ ಇಲ್ಲಿಗೆ ಸಾವಿರಾರು ಸಂಖ್ಯೆಯ ಭಕ್ತರು ಮಹಾಬಲೇಶ್ವರನ ದರ್ಶನ ಪಡೆಯಲು ಆಗಮಿಸುತ್ತಾರೆ. ಶಿವನ ಪುಣ್ಯಕ್ಷೇತ್ರ ಹಾಗೂ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಗೋಕರ್ಣ ರಥಬೀದಿಯಲ್ಲಿ ಅಳವಡಿಸಲಾದ ಸೂಚನಾ ಫಲಕ ಇದೀಗ ವಿವಾದಕ್ಕೆ ಕಾರಣವಾಗಿದೆ.
ಎರಡು ಗುಂಪಿನ ನಡುವೆ ಗಲಾಟೆ: ಮೂವರಿಗೆ ಗಂಭೀರ ಗಾಯ
ಹೌದು, ರಥ ಬೀದಿಯಲ್ಲಿ ಸಂಚರಿಸಬೇಕು ಎಂದರೆ ಇನ್ನುಮುಂದೆ ರಸ್ತೆಯಲ್ಲಿ ಅರೆಬರೆ ಬಟ್ಟೆ ಧರಿಸುವಂತಿಲ್ಲ. ದೇವಸ್ಥಾನದ ಪಕ್ಕದಲ್ಲಿ ಇರುವ ರಥ ಬೀದಿಯಿಂದ ಪಶ್ಚಿಮ ದ್ವಾರದ ವರೆಗೆ ಅರೆಬರೆ ಉಡುಪು ಧರಿಸಿ ಸಾರ್ವಜನಿಕರು ಸಂಚರಿಸಲು ನಿಷೇಧ ಹೊರಡಿಸಿ ಮಹಾಬಲೇಶ್ವರ ದೇವಸ್ಥಾನದ ಸಮಿತಿ ಸೂಚನಾ ಫಲಕ ಅಳವಡಿಸಿದೆ. ದೇವಸ್ಥಾನದ ಒಳಗಡೆಯಾದರೆ ವಸ್ತ್ರಸಂಹಿತೆ ಓಕೆ. ಆದರೆ, ಸಾರ್ವಜನಿಕ ಸ್ಥಳವಾದ ರಥ ಬೀದಿಯಲ್ಲಿ ಸಂಚರಿಸುವುದಕ್ಕೂ ವಸ್ತ್ರಸಂಹಿತೆ ಮಾಡಿರುವುದು ಕೆಲ ವಿರೋಧಕ್ಕೂ ಕಾರಣವಾಗಿದೆ.
ವಿಸ್ಮಯ ನ್ಯೂಸ್, ಗೋಕರ್ಣ