ಕರ್ನಾಟಕ ಸರಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ ಬೆಂಗಳೂರು, ಇಲ್ಲಿ ಒಟ್ಟು 487 ವಿವಿಧ ಹುದ್ದೆಗಳು ಖಾಲಿಯಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸ್‌ಎಸ್‌ಎಲ್‌ಸಿ, ಡಿಪ್ಲೋಮಾ, ಐಟಿಐ, ಪದವಿ, ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ಆರಂಭಿಕ ಮಾಸಿಕ ಸಂಬಳ 17 ಸಾವಿರದಿಂದ 99, 600 ರೂಪಾಯಿ ಆಗಿದ್ದು, ಅರ್ಜಿ ಸಲ್ಲಿಸುಬ ಅಭ್ಯರ್ಥಿಗೆ ಕನಿಷ್ಠ 18 ಮತ್ತು ಗರಿಷ್ಠ 40 ವರ್ಷ ವಯಸ್ಸಾಗಿರಬೇಕು ಎಂದು ತಿಳಿಸಲಾಗಿದೆ.
Recruitment 2022: SSLC ಪಾಸಾದವರಿಗೆ ಉದ್ಯೋಗಾವಕಾಶ: 21 ರಿಂದ 69 ಸಾವಿರ ಆರಂಭಿಕ ವೇತನ
KMF Recruitment: ಅರ್ಜಿ ಸಲ್ಲಿಸುವ ವಿಧಾನ
ಹೌದು, ಸಹಾಯಕ ನಿರ್ದೇಶಕ, ಸುರಕ್ಷತಾ ಅಧಿಕಾರಿ, ಅಧೀಕ್ಷಕ, ಲೆಕ್ಕ ಸಹಾಯಕ, ಹಿರಿಯ ಉಪ ನಿರ್ದೇಶಕ, ಆಡಳಿತ ಸಹಾಯಕ ಮತ್ತು ಹಿರಿಯ ತಾಂತ್ರಿಕ ಸೇರಿದಂತೆ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 20 ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನ ಡಿಸೆಂಬರ್ 19 ಆಗಿದೆ.
ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ , ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ನೇಮಕಾತಿ ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 17,000 ರಿಂದ ರೂ. 99,600ವರೆಗೂ ವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ಆರಂಭ | 20-11-2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 19-12-2022 |
ವೇತನ | 17 ಸಾವಿರದಿಂದ 99,700 |
ಅರ್ಜಿ ಸಲ್ಲಿಕೆ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
Job Alert: ಉದ್ಯೋಗಾವಕಾಶದ ಕುರಿತ ಎಲ್ಲಾ ಸುದ್ದಿಗಳನ್ನು ನೋಡಲು ಈ ಲಿಂಕ್ ಕ್ಲಿಕ್ ಮಾಡಿ: vismaya24x7.com/category/job-news/
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್