Important
Trending

ಕಿರಾಣಿ ಅಂಗಡಿ ಹಾಗೂ ಹೊಟೆಲ್ ಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ : ವಿಡಿಯೋ ಸಾಕ್ಷಿ ಸಮೇತ ಮಹಿಳೆಯಿಂದ ದೂರು

ಶಿರಸಿ: ತಾಲೂಕಿನ ಬಿಸಲಕೊಪ್ಪ ಭಾಗದ ಕಿರಾಣಿ ಅಂಗಡಿ ಹಾಗೂ ಹೊಟೆಲ್ ಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಜೋರಾಗಿದೆ., ತಕ್ಷಣವೇ ಮದ್ಯ ಮಾರಾಟವನ್ನು ತಡೆಯುವಂತೆ ಎಕ್ಕಂಬಿ ಭಾಗದ ಮಹಿಳೆಯರು ತಾಲೂಕು ದಂಡಾಧಿಕಾರಿಗೆ ಮನವಿ ಸಲ್ಲಿಸಿದರು. ಬುಧವಾರ ಶಿರಸಿ ತಹಶಿಲ್ದಾರರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ಅವರು ತಾಲೂಕಿನ ಬಿಸಲಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಿಸಲಕೊಪ್ಪ ಮತ್ತು ಎಕ್ಕಂಬಿಯಲ್ಲಿ  ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಕಿರಾಣಿ ಅಂಗಡಿ ಹಾಗೂ ಹೊಟೆಲ್ ಗಳಲ್ಲಿ ಸಾರಾಯಿ ಮಾರಾಟ ಮಾಡಲಾಗುತ್ತಿದೆ ಎಂದು ವಿಡಿಯೋ ಸಾಕ್ಷಿ ಸಹಿತವಾಗಿ ಆರೊಪಿಸಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

hitendra naik

Related Articles

Back to top button