ಕುಮಟಾ: ತಾಲೂಕಿನ ಊರಕೇರಿಯ ತಲಗೋಡಿನ ಶ್ರೀ ಸ್ವರ್ಣ ಮಹಾಸತಿ ಯಕ್ಷಿ ಚೌಡೇಶ್ವರಿ ದೇವಾಲಯದಲ್ಲಿ 3 ನೇ ವರ್ಷದ ಕಾರ್ತೀಕ ದೀಪೋತ್ಸವ ಹಾಗೂ ದೇವರ ಪಲ್ಲಕ್ಕಿಯ ಗ್ರಾಮ ಸಂಚಾರ ಕಾರ್ಯಕ್ರಮ ಅತ್ಯಂತ ವಿಜ್ರಂಭಣೆಯಿoದ ನಡೆಯಿತು. ಶ್ರೀ ದೇವರ ಪಲ್ಲಕ್ಕಿ ಮೆರವಣಿಗೆಯು ಸನ್ನಿಧಾನದಿಂದ ಹೊರಟು ಹರನೀರಿಗೆ ತೆರಳಿ ಬಗ್ಗೋಣ ಮಾರ್ಗವಾಗಿ ಕುಮಟಾ, ಹೆರವಟ್ಟಾ, ವಾಲಗಳ್ಳಿ, ಹೊಸ ಹಿತ್ತಲು, ಉಂಚಗಿ ಮುಖೇನವಾಗಿಪುನಃ ತಲಗೋಡಿಗೆ ತಲುಪಿತು. ರಾತ್ರಿ 10 ಗಂಟೆಗೆ ಬೃಹತ್ ಸಿಡಿಮದ್ದು ಪ್ರದರ್ಶನ ನಡೆಯಿತು. ನಂತರ ಶ್ರೀ ದೇವಿಯ ಪಲ್ಲಕ್ಕಿಯ ಪುರಪ್ರವೇಶ, ಉತ್ಸವ ಮೂರ್ತಿಯ ಶುದ್ಧೀಕರಣ ನಡೆಸಿ ಗರ್ಭಗುಡಿಯ ಪ್ರವೇಶ ಮಾಡಿತು. ನಂತರ ನಡೆದ ದೀಪೋತ್ಸವ ಕಾರ್ಯಕ್ರಮಕ್ಕೆ ಮುಖಂಡರಾದ ಸೂರಜ್ ನಾಯ್ಕ ಸೋನಿ ಹಾಗೂ ಅತಿಥಿ ಮಹೋದಯರು ಚಾಲನೆಯನ್ನು ನೀಡಿದರು. ಶ್ರೀ ದೇವಿಗೆ ಲೋಕಕಲ್ಯಾಣಾರ್ಥವಾಗಿ 118 ಆರತಿ ಸೇವೆಯನ್ನು ನಡೆಸಲಾಯಿತು. ತದ ನಂತರ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.
ರಾಷ್ಟ್ರಮಟ್ಟದ INICET ಪರೀಕ್ಷೆಯಲ್ಲಿ ನಾಲ್ಕನೇ ರ‍್ಯಾಂಕ್: ಸಾಧಕ ವಿದ್ಯಾರ್ಥಿನಿಯನ್ನು ಅಭಿನಂದಿಸಿ
ಸಭಾ ಕಾರ್ಯಕ್ರಮವನ್ನು ಸೂರ್ಯಕಾಂತ ಜಿ. ಭಟ್ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಶಿಷ್ಯರು ಗುರುಗಳಿಗಿಂತ ಹೆಚ್ಚಿ ಸಾಧನೆ ಮಾಡಿದಾಗ ಮಾತ್ರ ಅದು ಶಿಕ್ಷಕರಿಗೆ ಸಿಗುವ ನಿಜವಾದ ಗೌರವ ಎಂದು ನುಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಪುಷ್ಪಾ ಮುಕ್ರಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಹನುಂತ ಪಟಗಾರ, ವೈದಿಕರಾದ ವೇದ ಮೂರ್ತಿ ವೆಂಕಟರಮಣ ಭಟ್, ನಿವೃತ್ತ ಶಿಕ್ಷಕರಾದ ಆರ್ ಜಿ ಭಟ್, ಸೇರಿದಂತೆ ಊರಿನ ಪ್ರಮುಖರು, ಸಾರ್ವಜನಿಕರು ಹಾಜರಿದ್ದರು.
ಇದೇ ವೇಳೆ 2021-2022 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿದ ರಾಮನಾಥ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಪ್ರೇರಣಾ ಪಟಗಾರ, ಮೇಘನಾ ನಾಯ್ಕ, ಪ್ರಜ್ಞಾ ನಾಯ್ಕ, ದೀಪಕ ಗೌಡ ಅವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ವಿಸ್ಮಯ ನ್ಯೂಸ್ ಕುಮಟಾ