Important
Trending

ರಾಷ್ಟ್ರಮಟ್ಟದ INICET ಪರೀಕ್ಷೆಯಲ್ಲಿ ನಾಲ್ಕನೇ ರ‍್ಯಾಂಕ್: ಸಾಧಕ ವಿದ್ಯಾರ್ಥಿನಿಯನ್ನು ಅಭಿನಂದಿಸಿ

ಗೋಕರ್ಣ: ಇಲ್ಲಿನ ಪ್ರತೀಕ್ಷಾ ಜಯಂತ ಪೈ ರಾಷ್ಟ್ರಮಟ್ಟ ದಲ್ಲಿ ಪ್ರಸಿದ್ಧ ನಾಲ್ಕು ವೈದ್ಯಕೀಯ ಸಂಸ್ಥೆಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿಗಾಗಿ ನಡೆಯುವ ಐಎನ್‌ಐಸಿಇಟಿ ಪರೀಕ್ಷೆಯಲ್ಲಿ 99.996% ದೊಂದಿಗೆ ನಾಲ್ಕನೇ ರ‍್ಯಾಂಕ್ ಪಡೆದಿದ್ದಾರೆ. 13 ನವಂಬರ 2022 ರಂದು ಈ ರಾಷ್ಟ್ರಮಟ್ಟದ ಪರೀಕ್ಷೆಯನ್ನು ಐಎನ್‌ಐಸಿಇಟಿ ಆಯೋಜಿಸಿತ್ತು.

ಪ್ರತೀಕ್ಷಾ ಪೈ ಕಳೆದ ವರ್ಷ ಎಂ.ಬಿ.ಬಿ.ಎಸ್. ನಲ್ಲಿ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ 12 ಬಂಗಾರದ ಪದಕಗಳನ್ನು ಪಡೆದು ಎಲ್ಲ ಹಿಂದಿನ ದಾಖಲೆಗಳನ್ನು ಮುರಿದು ಹೊಸ ದಾಖಲೆ ಸ್ಥಾಪಿಸಿದ್ದರು. ಈಕೆಯ ಅಪೂರ್ವ ಸಾಧನೆಗೆ ಕುಟುಂಬದವರು, ಆಪ್ತೇಷ್ಟರು, ಗುರುಹಿರಿಯರು ಹಾರೈಸಿ ಆಶೀರ್ವದಿಸಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Back to top button