Important
Trending

ಶ್ರೀ ಕೊಗ್ರೆ ಬೊಮ್ಮಯ್ಯ ದೇವರ ನೂತನ ಶಿಲಾಮಯ ಕಟ್ಟಡದ ಪಾದುಕಾ ಪೂಜೆ

  • ಜ.20ರ ಬುಧವಾರ ಮುಂಜಾನೆ 10.14ಕ್ಕೆ ಕಾರ್ಯಕ್ರಮ
  • ಶಾಸಕಿ, ಸಚಿವರು ಮತ್ತಿತರ ಗಣ್ಯರ ಉಪಸ್ಥಿತಿ
  • ಭಕ್ತ ಜನರಿಗೆ ಪ್ರೀತಿ ಪೂರ್ವಕ ಸ್ವಾಗತ

ಅಂಕೋಲಾ : ತಾಲೂಕಿನ ಪ್ರಸಿದ್ಧ ಶ್ರೀ ಕೊಗ್ರೆ ಬೊಮ್ಮಯ್ಯ ದೇವರ ನೂತನ ಶಿಲಾಮಯ ಕಟ್ಟಡದ ಪಾದುಕಾ ಪೂಜೆ ಜ.20 ಬುಧವಾರ ಮುಂಜಾನೆ 10.14 ಗಂಟೆಗೆ ನಡೆಯಲಿದ್ದು, ತದನಂತರ 10.30ಕ್ಕೆ ಕೊಗ್ರೆ ಬಂಡಿ ಹಬ್ಬದ ಜಾತ್ರಾ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.

ಸ್ಥಳೀಯ ಶಾಸಕಿ ರೂಪಾಲಿ ಎಸ್. ನಾಯ್ಕ ಅಧ್ಯಕ್ಷತೆ ವಹಿಸಲಿದ್ದು, ಉ.ಕ.ಜಿಲ್ಲಾ ಉಸ್ತುವಾರಿ ಮಂತ್ರಿ ಶಿವರಾಮ ಹೆಬ್ಬಾರ ಮುಖ್ಯ ಅಥಿತಿಗಳಾಗಿ ಹಾಗೂ ಪ್ರಮುಖರಾದ ವಾಸ್ತುತಜ್ಞ ವಿಧ್ವಾನ ಗುಂಡಿ ಬೈಲ್ ಸುಬ್ರಮಣ್ಯ ಭಟ್ಟ್ ಉಡಪಿ, ಮಾಜಿ ಶಾಸಕ ಸತೀಶ ಕೇ.ಸೈಲ್ ಕಾರವಾರ, ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ರಮಾನಂದ ಬಿ.ನಾಯಕ, ನಿವೃತ್ತ ಜಿಲ್ಲಾ ನೋಂದಣಾಧಿಕಾರಿ ಅರುಣ ಕಲ್ಲಗುಜ್ಜಕರ, ದ್ವಾರಕಾ ಸೌಹಾರ್ದ ಸಹಕಾರಿಯ ಅಧ್ಯಕ್ಷ ಮಯೂರ್ ಆರ್.ನಾಯಕ, ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನು ಮಂತ ಬೊಮ್ಮು ಗೌಡ, ಶಿಲಾಮಯದ ಕಟ್ಟಡದ ಗುತ್ತಿಗೆದಾರ ನಾಗರಾಜ ತಂತ್ರಿ ಕಾರ್ಕಳ, ಉದ್ದಿಮೆ ಗಣಪತಿ ನಾಗೇಶ ಪಾಲನಕರ ಬಾಸಗೋಡ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ನೂತನ ಕಟ್ಟಡ

ಶ್ರೀ ಕೊಗ್ರೆ ಬೊಮ್ಮಯ್ಯ ದೇವರ ದೇಗುಲ ನವೀಕರಣ ಸಮಿತಿಯ ಅಧ್ಯಕ್ಷರಾದ ದೇವಾನಂದ ಬಿ. ಗಾಂವಕರ, ಪದಾಧಿಕಾರಿಗಳು, ಕಾರ್ಯಕಾರಿ ಮಂಡಳಿಯ ಸದಸ್ಯರು, ಗಾಂವಕರು, ಕಟ್ಟಿಗೆದಾರರು, ಗುನಗರು ಮತ್ತು ಗ್ರಾಮಸ್ಥರು ಸರ್ವ ಭಕ್ತಾಧಿಗಳಿಗೆ ಪ್ರೀತಿ ಪೂರ್ವಕ ಆಮಂತ್ರಣ ಕೋರಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button