Important
Trending

ಅಕ್ರಮ ಮದ್ಯವನ್ನು ಅರಣ್ಯದಲ್ಲಿ 64 ಗೋಣಿಚೀಲದಲ್ಲಿ ಅಡಗಿಸಿಟ್ಟಿದ್ದರು : ಅಪಾರ ಸರಾಯಿ ವಶಕ್ಕೆ

ಕಾರವಾರ: ಅರಣ್ಯದಲ್ಲಿ ಹುದುಗಿಸಿಟ್ಟ ಬರೊಬ್ಬರಿ 6.70 ಲಕ್ಷ ಮೌಲ್ಯದ ಅಕ್ರಮ ಗೋವಾ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ಘಟನೆ ಕಾರವಾರದ ಮಾಜಾಳಿ ಬಳಿ ನಡೆದಿದೆ. ಗೋವಾ ರಾಜ್ಯದ ಪರವಾನಗಿ ಹೊಂದಿದ್ದ ಮದ್ಯಗಳನ್ನು ದಾಸ್ತಾನು ಮಾಡಿರುವ ಬಗ್ಗೆ ಖಚಿತವಾದ ಮಾಹಿತಿಯನ್ನು ಪಡೆದ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರು. 1423 ಲೀಟರ್ ಗೋವಾ ಮದ್ಯ ಹಾಗೂ 228 ಲೀಟರ್ ಗೋವಾ ಬಿಯರ್ ಅನ್ನು ಕಾಡಿನಲ್ಲಿ ಅಡಗಿಸಿಡಲಾಗಿತ್ತು. ಗೋವಾದಲ್ಲಿ ಮದ್ಯದ ದರ ಕಡಿಮೆ ಇದ್ದು, ಅದನ್ನು ಅಕ್ರಮವಾಗಿ ಕಾರವಾರ ಮೂಲಕ ತಂದು ಕರ್ನಾಟಕದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಅಬಕಾರಿ ಇಲಾಖೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

ಮದುವೆ ಆಗುತ್ತಿಲ್ಲವೇ? ಉದ್ಯೋಗ ಸಮಸ್ಯೆಯೇ? ಇಲ್ಲಿದೆ ಪರಿಹಾರ

ದೈವಜ್ಞ ವಿದ್ಯಾಭೂಷಣ ಪ್ರಶಸ್ತಿ ವಿಜೇತರು, ದುರ್ಗಾದೇವಿ ಉಪಾಸಕರಾದ ಪಂಡಿತ ಶ್ರೀ ವಿ.ರಾಘವೇಂದ್ರ ರಾವ್ ಶಾರ್ಮಾ ಅವರು ಕೆಲವೇ ದಿನಗಳಲ್ಲಿ ಈ ಸಮಸ್ಯೆಗಳಿಗೆ ಮುಕ್ತಿ ನೀಡುತ್ತಾರೆ. ಇವರು ಕಾಶಿಯಲ್ಲಿ ಜ್ಞಾನ ತಪಸ್ಸಿನಿಂದ ಯಂತ್ರ-ಮoತ್ರ-ವಾಕ್ಯಸಿದ್ಧಿ-ಸ0ಪಾದಿಸಿದ್ದು, ನೀವು ದೂರವಾಣಿ ಮೂಲಕ ಸಂಪರ್ಕಿಸಿ, ಪರಿಹಾರ ಕಂಡುಕೊಳ್ಳಬಹುದು. ಕೂಡಲೇ ಸಂಪರ್ಕಿಸಿ: 9440269990

Back to top button