Important
Trending

ರಸ್ತೆಯ ಎರಡು ಬದಿಯಲ್ಲಿ 10 ಕೀಲೋಮೀಟರ್‌ಗೂ ಹೆಚ್ಚು ಲಾರಿಗಳ ಕ್ಯೂ: ಅರಬೈಲ್ ಘಾಟಿನಲ್ಲಿ ಇನ್ನೂ ಶುರುವಾಗಿಲ್ಲ ಭಾರೀ ಗಾತ್ರದ ವಾಹನಗಳ ಸಂಚಾರ

ಕಾರವಾರ: ಅಂಕೋಲಾ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್‌ನಲ್ಲಿ ಹೆದ್ದಾರಿ ಕುಸಿತದಿಂದಾಗಿ ಭಾರಿ ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಪರಿಣಾಮ ಮಲೆನಾಡು ಮತ್ತು ಬಯಲುಸೀಮೆ ಸಂಪರ್ಕ ಕಡಿತಗೊಂಡು ಸರಕು ಸಾಗಾಣಿಕೆಯ 500ಕ್ಕೂ ಹೆಚ್ಚು ಲಾರಿಗಳು ಅಂಕೋಲಾದ ಬಾಳೆಗುಳಿಯಲ್ಲಿ ಕಳೆದ ಕೆಲದಿನಗಳಿಂದ ಸಾಲುಗಟ್ಟಿ ನಿಂತಿವೆ.

ಹೌದು, ಭಾರಿ ಮಳೆಯಿಂದಾಗಿ ಅರೆಬೈಲ್ ಘಟ್ಟದಲ್ಲಿ ಗುಡ್ಡಕುಸಿತವಾಗಿ ದೊಡ್ಡ ವಾಹನಗಳ ಸಂಚಾರಕ್ಕೆ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಮಂಗಳೂರು, ಕೇರಳಗಳಿಂದ ಸರಕನ್ನು ತುಂಬಿಕೊoಡು ಮಹಾರಾಷ್ಟ್ರ, ಆಂದ್ರಪ್ರದೇಶ, ಗುಜರಾತ್ ಮತ್ತು ಹುಬ್ಬಳ್ಳಿ ಬೆಳಗಾಂವ ಭಾಗಗಳಿಗೆ ಸಾಗುವ ಲಾರಿಗಳು ಕಳೆದ ಮೂರು ದಿನದಿಂದ ಹಟ್ಟಿಕೇರಿಯ ಐಆರ್‌ಬಿ ಟೋಲ್‌ಗೇಟನಿಂದ ಅಂಕೋಲಾ ಅಜ್ಜಿಕಟ್ಟಾದವರೆಗೆ ಸುಮಾರು 10 ಕಿ.ಮಿ ಹೆದ್ದಾರಿಯ ಎರಡು ಬದಿಯಲ್ಲಿ ಲಂಗರು ಹಾಕಿವೆ.

ಈ ಹೆದ್ದಾರಿ ತಕ್ಷಣ ಆರಂಭವಾಗದಿದ್ದರೆ ವಾಣಿಜ್ಯೋದ್ಯಮದ ಮೇಲೆ ಭಾರಿ ಪರಿಣಾಮ ಬೀರಲಿದೆ. ಮಂಗಳೂರು ಬಂದರಿನಿoದ ಅನಿಲ ತುಂಬಿದ ಟ್ಯಾಂಕರಗಳು ಈ ಹೆದ್ದಾರಿ ಮೂಲಕವೇ ಸಾಗಬೇಕು ಇದು ಬಿಟ್ಟರೆ ಬೇರಾವ ದಾರಿ ಇಲ್ಲ. ಇಂತಹ ಅನಿಲ ತುಂಬಿದ ನೂರಾರು ಟ್ಯಾಂಕರ ಇಲ್ಲಿ ಸಿಲುಕಿಕೊಂಡಿದೆ. ಇತರ ವಸ್ತುಗಳ ಲಾರಿಗಳು ಸಿಲುಕಿಕೊಡಿದೆ. ಈಗಾಗಲೇ ಲಘು ವಾಹನಗಳ ಸಂಚಾರ ಆರಂಭಗೊoಡಿದೆ. ಆದರೆ, ಭಾರೀ ಗಾತ್ರದ ವಾಹನ ಸಂಚಾರ ಇನ್ನೂ ಆರಂಭವಾಗಿಲ್ಲ.

ಇಲ್ಲಿ ನಿಲ್ಲಿಸಿಟ್ಟ ಲಾರಿಯ ಚಾಲಕ ಮತ್ತು ಕ್ಲೀನರಗಳು ಲಾರಿಯಲ್ಲಿಯೆ ಅಡುಗೆ ಮಾಡಿ ಊಟ ಮಾಡುತ್ತಿದ್ದರೆ ಇನ್ನೂ ಕೆಲವರಿಗೆ ಕೆಲ ಸಂಘ ಸಂಸ್ಥೆಗಳು ಊಟ ಪೂರೈಸುತ್ತಿದ್ದಾರೆ. ವಾರದಿಂದ ಲಾರಿ ನಿಲ್ಲಿಸಿಕೊಂಡು ಹೆದ್ದಾರಿ ಮೇಲೆ ವಾಸ್ತವ್ಯ ಮಾಡಿರುವುದರಿಂದ ಒಂದೆರಡು ದಿನಕ್ಕೆ ಆಗುವಷ್ಟು ತಂದಿರುವ ಅಕ್ಕಿ ಬೆಳೆ ಮತ್ತು ಕೈಯಲ್ಲಿರುವ ಹಣವು ಕಾಲಿ ಆಗಿದೆ. ನಾವು ಉಪವಾಸ ಉಳಿಯುವ ಸ್ಥಿತಿ ಬಂದೋದಗಿದೆ ಎಂದು ಲಾರಿ ಚಾಲಕರು ಅಸಾಯಕತೆ ತೋಡಿಕೊಂಡಿದ್ದಾರೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

ವಿಸ್ಮಯ ನ್ಯೂಸ್, ಕಾರವಾರ

Back to top button