Focus News
Trending

ನವೆಂಬರ್ 20 ರಂದು ಶಿರಸಿ ತಾಲೂಕ ಅರಣ್ಯ ಅತಿಕ್ರಮಣದಾರರ ಸಭೆ

ಶಿರಸಿ: ತಾಲೂಕ ಅರಣ್ಯ ಅತಿಕ್ರಮಣದಾರರ ಸಭೆಯನ್ನ ದಿನಾಂಕ 25, ಶುಕ್ರವಾರ ಮುಂಜಾನೆ 10 ಗಂಟೆಗೆ ಶಿರಸಿಯಲ್ಲಿನ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಕರ‍್ಯಾಲಯದಲ್ಲಿ ಕರೆಯಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ. ಅರಣ್ಯವಾಸಿಗಳ ಸಮಸ್ಯೆ ಸಮಗ್ರ ಕ್ರೂಢೀಕರಿಸಿ ಅರಣ್ಯವಾಸಿಗಳ ಹಿತ ಕಾಪಾಡುವ ಮತ್ತು ಭೂಮಿ ಹಕ್ಕಿಗೆ ಅಗ್ರಹಿಸಿ ಡಿಸೆಂಬರ್ 10 ರಂದು ಶಿರಸಿಯಲ್ಲಿ ರಾಜ್ಯಮಟ್ಟದ ಅರಣ್ಯವಾಸಿಗಳ ರ‍್ಯಾಲಿ ಸಂಘಟಿಸಲಾಗಿರುವ ಹಿನ್ನೆಲೆಯಲ್ಲಿ, ಅಸರ‍್ಪಕ ಜಿಪಿಎಸ್ ಮೇಲ್ಮನವಿ ಅಭಿಯಾನ ಹಾಗೂ ಅರಣ್ಯ ಸಿಬ್ಬಂದಿಗಳಿಂದ ಉಂಟಾಗುತ್ತಿರುವ ದರ‍್ಜನ್ಯ, ಕಿರುಕುಳ ಕುರಿತು ರ‍್ಚಿಸಲಾಗುವುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಾರಣ, ಆಸಕ್ತ ಅರಣ್ಯ ಅತಿಕ್ರಮಣದಾರರು ಶಿರಸಿ ತಾಲೂಕ ಅರಣ್ಯ ಅತಿಕ್ರಮಣದಾರರ ಸಭೆಗೆ ಹಾಜರಾಗಲು ರವೀಂದ್ರ ನಾಯ್ಕ ಕೋರಿದ್ದಾರೆ.

23 ರಂದು ಬೇಡ್ಕಣಿಯಲ್ಲಿ ಸಭೆ: ಸಿದ್ಧಾಪುರ ತಾಲೂಕಿನ ಬೇಡ್ಕಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಅರಣ್ಯ ಅತಿಕ್ರಮಣದಾರರ ಸಭೆಯನ್ನ ದಿನಾಂಕ 23 ರ ಮುಂಜಾನೆ 9 ರಿಂದ 10:30 ರವರೆಗೆ ಬೇಡ್ಕಣಿಯ ಶ್ರೀ ಕೋಟೆ ಹನುಮಂತ ಪ್ರತಿಷ್ಠಾನ ದೇವಾಲಯದ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Back to top button