ಆಂಬ್ಯುಲೆನ್ಸ್ ನ ವೆಂಟಿಲೇಟರ್ ಮಶಿನ್ ಹಾಗೂ ಸ್ಟೆಪ್ನಿ ಟಯರ್‌ಗಳನ್ನ ಕದ್ದ ಕಳ್ಳ ಅರೆಸ್ಟ್

ಶಿರಸಿ: ಇಲ್ಲಿನ ನಗರದ ಪಿಡಬ್ಲ್ಯೂಡಿ ಐಬಿ ಆವರಣದ ಶೆಡ್ ಒಂದರಲ್ಲಿ ನಿಲ್ಲಿಸಲಾಗಿದ್ದ ಅಂಬ್ಯುಲೆನ್ಸ್ ನ ವೆಂಟಿಲೇಟರ್ ಮಶಿನ್ ಹಾಗೂ ಸ್ಟೆಪ್ನಿ ಟಯರ್‌ಗಳನ್ನ ಕದ್ದೊಯ್ದಿದ್ದವನನ್ನ ಪೊಲೀಸರು ಬಂಧಿಸಿದ್ದಾರೆ. ನವೆಂಬರ್ ನಾಲ್ಕರಂದು ಈ ಕುರಿತು ದೂರು ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಆರೋಪಿ ಸಿರಾಜ್ ಅಹಮದ್‌ನನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 1.5 ಲಕ್ಷ ಮೌಲ್ಯದ ವೆಂಟಿಲೇಟರ್ ಮಶಿನ್, ಹಾಗೂ 3 ಸಾವಿರ ಮೌಲ್ಯದ ಸ್ಟೆಪ್ನಿ ಟಯರ್ ಜಪ್ತಿಪಡಿಸಿಕೊಂಡಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Exit mobile version