Big NewsImportant
Trending

ಯಶಸ್ವಿಯಾಗಿ ಸಂಪನ್ನವಾದ ಜನಜಾಗೃತಾ ಸಮಾವೇಶ: ಕಾರ್ಯಕ್ರಮಕ್ಕೆ ಹರಿದುಬಂದ ಜನಸಾಗರ

ಕುಮಟಾ: ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಬಿ.ಜೆ.ಪಿಗರು ಮಾಡಿರುವ ಮೋಸವನ್ನು ಸಾರ್ವಜನಿಕರ ಮುಂದೆ ತೆರೆದಿಡುವ ಉದ್ಧೇಶದಿಂದ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಇಂದು ಕುಮಟಾದ ಮಣಕಿ ಮೈದಾನದಲ್ಲಿ ಹಮ್ಮಿಕೊಳ್ಳಲಾದ ಬೃಹತ್ ಜನಜಾಗೃತಾ ಸಭೆಯು ಯಶಸ್ವಿಯಾಗಿ ಸಂಪನ್ನಗೊoಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕೆ.ಪಿ.ಸಿ.ಸಿ ರಾಜ್ಯಾಧ್ಯಕ್ಷರಾದ ಡಿ.ಕೆ ಶಿವಕುಮಾರ ಅವರು ದೀಪ ಬೆಳಗುವ ಮೂಲಕ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ ಅವರು, ಉತ್ತರ ಕನ್ನಡ ಜಿಲ್ಲೆಯ ಮಹಾ ಜನತೆಯು ನಮಗೆ ಅತಿ ದೊಡ್ಡ ಶಕ್ತಿ ಕೊಡಲಿದ್ದಾರೆ ಎಂಬ ಭರವಸೆಯೊಂದಿಗೆ ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆನೆ. ಇಂದು ಇಡಿ ಜಿಲ್ಲೆ ನೋವಿನಿಂದ ನರಳುತ್ತಿದೆ. ಕಳೆದ ವಿಧನಾಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದ ಪರೇಶ್ ಮೇಸ್ತಾ ಸಾವಿನ ಪ್ರಕರಣಕ್ಕೆ ಸಂಬoಧಿಸಿದoತೆ ಸಂಸದರಾದ ಅನಂತ ಕುಮಾರ ಹೆಗಡೆ ಅವರು ಹನಿ ಹನಿ ರಕ್ತಕ್ಕೂ ಸಹ ನ್ಯಾಯ ಕೊಡಿಸಲಾಗುವುದು ಎಂಬ ಹೇಳಿಕೆ ನೀಡಿದ್ದರು. ಆದರೆ ಇದೀಗ ನ್ಯಾಯಕೊಡಿಸುವ ಸಂಸದರ ಪತ್ತೆಯೆ ಇಲ್ಲ. 2000 ಕ್ಕೂ ಅಧಿಕ ಅಮಾಯಕ ಯುವಕರ ಮೇಲೆ ಪೊಲೀಸ್ ಪ್ರಕರಣ ದಾಖಲಾಗಿತ್ತು. ಅವರಿಗೂ ಸಹ ನ್ಯಾಯ ಕೊಡಿಸುವಲ್ಲಿ ಬಿ.ಜೆ.ಪಿ ವಿಫಲವಾಗಿದೆ ಎಂದರು.

ಸ್ಕೂಟಿ ಮತ್ತು ಬೈಕ್ ನಡುವೆ ಅಪಘಾತ : ಬೈಕ್ ಸವಾರ ಸಾವು

ಕೇವಲ ಹಿಂದು ಎನ್ನುವ ಸರ್ಕಾರ ನಮ್ಮದಲ್ಲ. ನಾವೆಲ್ಲರೂ ಒಂದು ಎನ್ನುವ ಪಕ್ಷ ನಮ್ಮದು. ಇಗಿನ ಡಬಲ್ ಇಂಜಿನ್ ಸರ್ಕಾರದಿಂದಾಗಿ ಯಾರೊಬ್ಬ ಜನಸಾಮಾನ್ಯರ ಜೀವನವೂ ಬದಲಾಗಿಲ್ಲವಾಗಿದ್ದು, ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆ ಮುಂತಾದವುಗಳಿoದ ಜನರು ಸಂಕಷ್ಠಕ್ಕೀಡಾಗಿದ್ದಾರೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದದ್ದೆ ಆದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೋಷ್ಕರ, ಉದ್ಯೋಗ ಸೃಷ್ಠಿ ಹಾಗೂ ಶಾಂತಿಯನ್ನು ಕಾಪಾಡುವದಕ್ಕೊಸ್ಕರ ಪ್ರತ್ಯೆಕವಾದ ಪ್ರನಾಳಿಕೆಯನ್ನು ಕೊಟ್ಟು ಜನ ಸಾಮಾನ್ಯರು ನೆಮ್ಮದಿಯಿಂದ ಬದುಕುವಂತೆ ಮಾಡುತ್ತೆವೆ. ಉದ್ಯೋಗವಕಾಶಕ್ಕೆ ಹೆಚ್ಚಿನ ಒತ್ತನ್ನು ನೀಡಿ, ಉತ್ತರ ಕನ್ನಡ ಜಿಲ್ಲೆಯ ಜನರ ಬಹುದೊಡ್ಡ ಬೇಡಿಕೆಯಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸಹ ನಿರ್ಮಾಣಮಾಡುತ್ತೆವೆ. ಇದು ಕಾಂಗ್ರೆಸ್ ಪಕ್ಷದ ವಚನ ಎನ್ನುತ್ತಾ ಜನಜಾಗೃತಾ ಸಭೆಯ ಆಯೋಜನೆ ಕುರಿತಾಗಿ ಮೆಚ್ಚು ವ್ಯಕ್ತಪಡಿಸಿ ಶ್ರಮಿಸಿದ ಸರ್ವರನ್ನೂ ಶ್ಲಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಉಸ್ತುವಾರಿ ಸಚಿವರು, ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್.ವಿ ದೇಶಪಾಂಡೆ ಅವರು ಮಾತನಾಡಿ, ಪರೇಸ್ತ ಮೇಸ್ತನ ಸಾವು ಸಹಜ ಸಾವಲ್ಲ ಇದೊಂದು ಕೊಲೆ ಎಂದುಕೊoಡು ಅಂದು ಬಿ.ಜೆ.ಪಿ ಸರ್ಕಾರವು ಕೋಮು ಗಲಭೆ ಎಬ್ಬಿಸಿ ಚುನಾವಣೆಯಲ್ಲಿ ಲಾಭ ಪಡೆದುಕೊಂಡಿದ್ದರು. ಆದರೆ ಇದೀಗ ಕೇಂದ್ರ ಸರ್ಕಾರದ, ಮೋದಿ ಸರ್ಕಾರದ ಅಧೀನದಲ್ಲಿ ಬರುವ ಸಿ.ಬಿ.ಐ ತನಿಕೆಯೇ ಇದೊಮದು ಸಹಜ ಸಾವೆಂದು ಬಿ. ರಿರ್ಪೊ ಸಲ್ಲಿಸಿದೆ. ಈ ನಿಟ್ಟಿನಲ್ಲಿ ಜನ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಈ ಒಂದು ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ನಿಮ್ಮ ನಿಮ್ಮ ಗ್ರಾಮದಲ್ಲಿ, ನಿಮ್ಮ ನಿಮ್ಮ ಹೋಬಳಿಯಲ್ಲಿ ಕ್ರಿಯಾಶೀಲರಾಗಿ ಇವತ್ತಿನ ಈ ಕಾರ್ಯಕ್ರಮ ಮುಖ್ಯ ಸಂದೇಶವನ್ನು ಇನ್ನಿತರರಿಗೆ ತಿಳಿಸುವ ಕಾರ್ಯ ಆಗಬೇಕು. ಇನ್ನು 6 ತಿಂಗಳಿನಲ್ಲಿ ಚುನಾವಣೆ ಬರಲಿದ್ದು, ಆ ಚುನಾವಣೆಯಲ್ಲಿ ಜನಪರ ಪಕ್ಷ, ರೈತರ ಪಕ್ಷವಾದ ಕಾಂಗ್ರೆಸ್ ಪಕ್ಷಕ್ಕೆ ತಮ್ಮೆಲ್ಲರ ಆಶಿರ್ವಾದ ಬೇಕಿದೆ ಎಂದರು.

ಈ ವೇಳೆ ಕೆ.ಪಿ.ಸಿ.ಸಿ ರಾಜ್ಯ ಕಾರ್ಯದರ್ಶಿಗಳಾದ ಐವನ್ ಡಿಸೋಜಾ ಅವರು ಮಾತನಾಡಿ, ಈ ಒಂದು ಜನಜಾಗೃತಿ ಸಮಾವೇಶವು ಸುಳ್ಳು ಹೇಳುವವರ ವಿರುದ್ಧ, ಜಾತಿ ಮತವೆಂಬ ಬೀಜ ಬಿತ್ತಿ ಸಮಾಜವನ್ನು ತುಂಡು ಮಾಡುವವರ ವಿರುದ್ಧವಾಗಿದೆ ಎನ್ನುತ್ತಾ, ಈ ಸಮಾವೇಶದಲ್ಲಿ ನನ್ನನ್ನು ಉಸ್ತುವಾರಿಯಾಗಿಸಿದ ಡಿ.ಕೆ. ಶಿವಕುಮಾರ ಅವರ ನಿರ್ದೇಶನದಂತೆ ಕಾರ್ಯನಿರ್ವಹಿಸಿದ್ದೆನೆ ಎಂದು ತಿಳಿಸಿದರು. ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶಾರದಾ ಮೋಹನ ಶೆಟ್ಟಿ ಅವರು ಮಾತನಾಡಿ, ನಮ್ಮೆಲ್ಲರ ನಿರೀಕ್ಷೆಗೂ ಮೀರಿ ಇಂದು ಈ ಬೃಹತ್ ಜನಜಾಗೃತಾ ಸಮಾವೇಶಕ್ಕೆ ಸಾರ್ವನಿಕರು ಆಗಮಿಸಿದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುವಕ್ಕೆ ಕೃತಜ್ಞತೆ ಸಲ್ಲಿಸುತ್ತೆನೆ ಎಂದರು.

ಒಟ್ಟಿನಲ್ಲಿ ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಬಿ.ಜೆ.ಪಿ ಗರು ಮಾಡಿರುವ ಮೋಸವನ್ನು ಸಾರ್ವಜನಿಕರ ಮುಂದೆ ತೆರೆದಿಡುವ ಪ್ರಯತ್ನದಿಂದಾಗಿ ಏರ್ಪಡಿಸಲಾದ ಬೃಹತ್ ಜನಜಾಗೃತಾ ಸಭೆಯು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಜಿಲ್ಲೆಯ ವಿವಿದ ಭಾಗಗಳಿಂದ ಸಹಸ್ರಾರಯ ಸಂಖ್ಯೆಯಲ್ಲಿ ಸಾರ್ವಜನಿಕರು, ಕಾಂಗ್ರೆಸ್ ಕಾರ್ಯಕರ್ತರು ಇನ್ನಿತರರು ಭಾಗವಹಿಸಿದ್ದರು. ಆಗಮಿಸಿದ ಸರ್ವರಿಗೂ ಆಸನದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು. ಸಭೆಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಎಂ.ಬಿ ಪಾಟೀಲ್, ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಭೀಮಣ್ಣ ನಾಯ್ಕ, ಪ್ರಮುಖರಾದ ಮಧು ಬಂಗಾರಪ್ಪ, ಮಯೂರ್ ಜಯಕುಮಾರ, ಯುಟಿ ಖಾದರ್, ಈಶ್ವರ ಖಂಡ್ರೆ ಮಾಜಿ ಶಾಸಕರಾದ ಸತಿಶ ಸೈಲ್, ಮಂಕಾಳ ವೈದ್ಯ ಮುಂತಾದ ಮುಖಂಡರುಗಳು ಹಾಜರಿದ್ದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ.

Back to top button