ಶಿರಸಿ: ಕಳೆದ ಅಕ್ಟೋಬರ್ 19ರಂದು ನಡೆದ ದರೋಡೆ ಪ್ರಕರಣದ 9 ಜನ ಅಂತರ ಜಿಲ್ಲಾ ದರೋಡೆಕೋರರನ್ನು ಬನವಾಸಿ ಪೊಲೀಸರು ತಾಲೂಕಿನ ಅಂಡಗಿಯಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಎರಡು ಕಾರುಗಳು, ಮೊಬೈಲ್, ಜಿಪಿಎಸ್ ಟ್ರ‍್ಯಾಕರ್ ಹಾಗೂ 13,82,000 ರೂ. ನಗದು ಹಣ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶಿವಮೊಗ್ಗ ಜಿಲ್ಲೆಯ ತೀರ್ಥಳ್ಳಿ, ಸಾಗರ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹಾಗೂ ಸಿದ್ದಾಪುರದಿಂದ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಅಂಗಳದಲ್ಲಿ ಆಟವಾಡುತ್ತಿದ್ದ ಎರಡು ವರುಷದ ಮಗುವಿಗೆ ಹಾವು ಕಚ್ಚಿ ಸಾವು
ಕಳೆದ ಅಕ್ಟೋಬರ್ 19ರಂದು ಸಂಜೆ ತನ್ನ ಇಬ್ಬರು ಸಂಬoಧಿಗಳೊoದಿಗೆ ಬೆಳಗಾವಿಯಲ್ಲಿ ಸೈಟ್ ಒಂದನ್ನು ನೋಡಿಕೊಂಡು ಕಾರಿನಲ್ಲಿ ವಾಪಸಾಗುತ್ತಿದ್ದ ಹಸನ್ ಜಾವೇದ್ ಖಾನ್ ಎಂಬುವವರು ಅಂಡಗಿ ಬಳಿ ಬರುತ್ತಿದ್ದಾಗ ಕಾರಿನಲ್ಲಿ ಬಂದು, ಅಡ್ಡ ಹಾಕಿ, ದರೋಡೆ ಮಾಡಲಾಗಿತ್ತು. ಈ ವೇಳೆ ಆರೋಪಿಗಳು ಕೈಯಲ್ಲಿ ಚಾಕು, ರಾಡ್, ಪಿಸ್ತೂಲ್ ಹಿಡಿದುಕೊಂಡು ದಾಳಿ ಮಾಡಿದ್ದರು. ಈ ವೇಳೆ 50 ಲಕ್ಷ ರೂಪಾಯಿ ಹಣವಿದ್ದ ಪ್ಲಾಸ್ಟಿಕ್ ಚೀಲವನ್ನು ಕಸಿದುಕೊಂಡು ಪಾರಾರಿಯಾಗಿದ್ದರು.
ಶಿವಮೊಗ್ಗ ಜಿಲ್ಲೆ ಸಾಗರದ ಆಸೀಫ ಅಬ್ದುಲ್ ಸತ್ತಾರ, ಮನ್ಸೂರ ಅಲಿಯಾಸ್ ಮಹಮ್ಮದ ಜಾಫರ ಖಾನ, ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಅಬ್ದುಲ್ ಹಮೀದ ಅಬ್ದುಲ್ ಸತ್ತಾರ, ಅಜಿಮುಲ್ಲಾ ಅನ್ವರಸಾಬ, ಅಬ್ದುಲ್ ರೆಹಮಾನ ಶಬ್ಬೀರ ವಟರಾಗ, ಚಿಕ್ಕಮಗಳೂರು ಜಿಲ್ಲೆಯ ರಿಯಾಜ ಫಯಾಜ, ವಿಶ್ವನಾಥ ವಾಸು ಶೆಟ್ಟಿ, ಕೊಪ್ಪ, ಮನೋಹರ ಆನಂದ ಶೆಟ್ಟಿ ಕೊಪ್ಪ, ಇಕ್ಬಾಲ್ ಕೆ. ಎ ತೀರ್ಥಹಳ್ಳಿ ಎಂದು ಆರೋಪಿಗಳು ಎಂದು ತಿಳಿದುಬಂದಿದೆ.
ಬನವಾಸಿ ಠಾಣೆಯಲ್ಲಿ ದರೋಡೆಗೆ ಒಳಗಾಗಿದ್ದ ಹಸನ್ ಜಾವೇದ ಖಾನ್ ದೂರು ನೀಡಿದ್ದರು. ವಿಶೇಷ ತಂಡ ರಚಿಸಿದ ಪೊಲೀಸರು ಇದೀಗ 9 ಆರೋಪಿಗಳನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಇನ್ನೂ ಕೆಲ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.
ವಿಸ್ಮಯ ನ್ಯೂಸ್. ಶಿರಸಿ