ಸಿಂಚನ ಜಿ. ಭಟ್ ರಾಷ್ಟ್ರಮಟ್ಟದ ಚೆಸ್ ಕ್ರೀಡಾಕೂಟಕ್ಕೆ ಆಯ್ಕೆ

ಕುಮಟಾ: ಸ್ಥಳೀಯ ಕುಮಟಾ ನಿರ್ಮಲಾ ಕಾನ್ವೆಂಟ್ ಪ್ರಾಥಮಿಕ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿಯಾದ ಸಿಂಚನ ಜಿ. ಭಟ್ ಇವಳು ದಿನಾಂಕ: 24/11/2022 ರಿಂದ 26/11/2022 ರವರೆಗೆ ಕಾರವಾರದಲ್ಲಿ ನಡೆದ ಪ್ರಾಥಮಿಕ ಶಾಲೆಗಳ ರಾಜ್ಯಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಕಾರವಾರ ಶೈಕ್ಷಣಿಕ ಜಿಲ್ಲೆಯನ್ನು ಪ್ರತಿನಿಧಿಸಿ ಒಂಬತ್ತರಲ್ಲಿ 7.5 ಅಂಕಗಳನ್ನು ಗಳಿಸುವ ಮೂಲಕ ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಷ್ಟ್ರಮಟ್ಟದ (School Games Federation of India) ಚೆಸ್ ಪಂದ್ಯಾವಳಿಗೆ ಆಯ್ಕೆಯಾಗಿರುತ್ತಾಳೆ.

ತೆಂಗಿನಮರದಿoದ ಕಾಯಿ ಕೊಯ್ಯುವ ವೇಳೆ ಅವಾಂತರ: ಕೆಳಗೆ ಬಿದ್ದು ಇಬ್ಬರ ಸಾವು

ಕಾರವಾರ ಶೈಕ್ಷಣಿಕ ಜಿಲ್ಲೆಯಿಂದ ಆಯ್ಕೆಯಾದ ಈ ವರ್ಷದ ಏಕೈಕ ಚೆಸ್ ಆಟಗಾರ್ತಿಯಾಗಿದ್ದು ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾಳೆ. ಇವಳನ್ನು ನಿರ್ಮಲಾ ಕಾನ್ವೆಂಟ್ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರು, ದೈಹಿಕ ಶಿಕ್ಷಕರು ಹಾಗೂ ಎಲ್ಲಾ ಶಿಕ್ಷಕರು ಅಭಿನಂದಿಸಿರುತ್ತಾರೆ. ಇವಳು ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ತೀರ್ಪುಗಾರರಾದ ಪ್ರೊ. ಜಿ. ಡಿ. ಭಟ್ ಇವರ ಪುತ್ರಿಯಾಗಿರುತ್ತಾಳೆ.

ವಿಸ್ಮಯ ನ್ಯೂಸ್, ಕುಮಟಾ

Exit mobile version