Follow Us On

Google News
Important
Trending

ಕರೊನಾ ಕುರಿತು ಜಾಗೃತಿ ಅಭಿಯಾನ

ಕುಮಟಾ: ಬಿ.ಜೆ.ಪಿ ಘಟಕದ ವತಿಯಿಂದ ಕುಮಟಾ ತಾಲೂಕಿನ ಸಾರ್ವಜನಿಕರಲ್ಲಿ ಕರೊನಾ ಕುರಿತಾಗಿ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿಯವರು ಬಿ.ಜೆ.ಪಿ ಕಾರ್ಯಾಲಯದಲ್ಲಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶಾಸಕರು, ಕುಮಟಾ ಬಿ.ಜೆ.ಪಿ ಮಂಡಲದ ವತಿಯಿಂದ ನಡೆಯಲಿರುವ ಕರೊನಾ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕರೊನಾ ಮಹಮ್ಮಾರಿ ನಮ್ಮ ರಾಜ್ಯ ಹಾಗೂ ನಮ್ಮ ಜಿಲ್ಲೆಗೆ ಮಾತ್ರ ಸಿಮಿತವಾಗಿದರದೆ ಜಗತ್ತಿನಾದ್ಯಂತ ಹರಡಿದೆ. ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಾವೆಲ್ಲ ಒಟ್ಟಾಗಿ, ವಿಶೇಷವಾಗಿ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಒಂದುಗೂಡಿ ಹಳ್ಳಿ ಹಳ್ಳಿಗೆ ತೆರಳಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ. ಈಗಾಗಲೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಬೇರೆ ಬೇರೆ ಹಂತದಲ್ಲಿ ಕರೊನಾ ನಿಯಂತ್ರಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಆದರೂ ಸಹ ನಮ್ಮ ವಿರೋಧಿಗಳು ಅಪ ಪ್ರಚಾರಗಳನ್ನು ಮಾಡುತ್ತಿರುವುದು ಬಹಳ ಬೇಸರದ ಸಂಗತಿ ಎಂದರು.

ಬಿ.ಜೆ.ಪಿ ಮುಖಂಡರಾದ ಡಾ. ಜಿ.ಜಿ ಹೆಗಡೆಯವರು ಮಾತನಾಡಿ, ಈ ಹಿಂದೆ ಬೆಂಗಳೂರು ಮುಂತಾದ ಪ್ರದೇಶದಿಂದ ಯಾರಾದರು ಬಂದರೆ ನಾವೇಲ್ಲ ಭಯಬೀತರಾಗುತ್ತಿದ್ದೇವು. ಆದರೆ ಈಗ ನಮ್ಮ ಸುತ್ತಮುತ್ತಲಿನ ಎಲ್ಲಾ ಭಾಗದಲ್ಲಿಯೂ ಕರೊನಾ ಸೋಂಕಿತ ಪ್ರಕರಣ ಕಂಡುಬoದಿದೆ. ಒಬ್ಬ ವೈದ್ಯನಾಗಿ ನಾನು ಹೇಳಬೇಕೆಂದರೆ ಬೇರೆಲ್ಲಾ ಕಾಯಿಲೆಗೆ ಹೋಲಿಸಿದರೆ ಕರೊನಾ ಕಾಯಿಲೆಯಿಂದ ಮರಣದ ಪ್ರಮಾಣ ಬಹಳ ಕಡಿಮೆ, ಯಾರೂ ಹೆದರುವ ಅವಶ್ಯಕತೆಯಿಲ್ಲ ಎಂದು ಧೈರ್ಯ ತುಂಬುವ ಪ್ರಯತ್ನ ಮಾಡಿದರು.
ಈ ಸಂದರ್ಭದಲ್ಲಿ ಬಿ.ಜೆ.ಪಿ ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯ್ಕ, ಮಂಡಲಾಧ್ಯಕ್ಷರಾದ ಹೇಮಂತ್ ಕುಮಾರ್, ಮುಖಂಡರಾದ ವಿನೋದ ಪ್ರಭು, ಎಮ್.ಜಿ ಭಟ್, ಜಿಲ್ಲಾ ಪಂಚಾಯತ ಸದಸ್ಯರಾದ ಗಜು ಪೈ ಮುಂತಾದವರು ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು. ಈ ಕೆಳಗಿನ ಫೇಸ್ ಬುಕ್ ಲಿಂಕ್ ಕ್ಲಿಕ್ ಮಾಡಿ, ಇದರ ವಿಡಿಯೋ ನ್ಯೂಸ್ ಕೂಡಾ ನೋಡಬಹುದು.

ವಿಸ್ಮಯ ನ್ಯೂಸ್,, ಯೋಗೇಶ ಮಡಿವಾಳ, ಕುಮಟಾ

ಕೇರಳದ ಭಗವತಿ ಜ್ಯೋತಿಷ್ಯರು
ಪ್ರಸಿದ್ಧ ಜ್ಯೋತಿಷ್ಯರು: 9663145459
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೆಲವೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button