ಕಾರವಾರ: ಜಾತ್ರೆ ಅಂದ್ಮೇಲೆ ಒಂದೊoದು ಕಡೆ ಒಂದೊoದು ವಿಶೇಷತೆ ಇರುತ್ತದೆ. ಅಲ್ಲಿನ ಜನರ ಆಚಾರ, ವಿಚಾರಗಳಿಗೆ ಅನುಗುಣವಾಗಿ ವಿಭಿನ್ನ ಆಚರಣೆಯನ್ನ ಸಹ ಮಾಡಲಾಗುತ್ತದೆ. ಅದರಂತೆ ಕರಾವಳಿ ನಗರಿ ಕಾರವಾರ ತಾಲೂಕಿನ ಆಮದಳ್ಳಿ ಗ್ರಾಮದಲ್ಲೊಂದು ವಿಭಿನ್ನ ಜಾತ್ರೆ ನಡೆಯಿತು. ಬೇರೆಲ್ಲಾ ಜಾತ್ರೆಗಿಂತ ಇಲ್ಲಿ ನಡೆಯುವ ಜಾತ್ರೆ ನಿಜಕ್ಕೂ ಡಿಫರೆಂಟ್. ಒಂದೆಡೆ ಬೃಹತ್ ಗಾತ್ರದ ಪಂಜುರ್ಲಿ, ತೋಳ, ಕೋಣ ಸೇರಿದಂತೆ ಬಗೆ ಬಗೆಯ ಮಾದರಿಗಳನ್ನ ಹೊತ್ತುಕೊಂಡು ಬರುತ್ತಿರುವ ವಿಭಿನ್ನ ವೇಭೂಷಣ ತೊಟ್ಟ ಜನರು. ಇನ್ನೊಂದೆಡೆ ಕಾಂತಾರ ಚಿತ್ರದ ದೈವ ನರ್ತಕ, ಕೊರಗಜ್ಜ, ಯಕ್ಷಗಾನ ಪಾತ್ರಧಾರಿ ಸೇರಿದಂತೆ ವಿವಿಧ ವೇಷಧಾರಿಗಳು ವಾಹನದ ಮೇಲೆ ಕುಳಿತಿರುವುದು. ಮತ್ತೊಂದೆಡೆ ಇವೆಲ್ಲವನ್ನ ಕಣ್ತುಂಬಿಕೊಳ್ಳುತ್ತಾ ಮೊಬೈಲ್ನಲ್ಲಿ ಸೆರೆ ಹಿಡಿದುಕೊಳ್ಳುತ್ತಿರುವ ಪ್ರೇಕ್ಷಕರು.
ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಇಬ್ಬರು ಆರೋಪಿಗಳ ಬಂಧನ
ಅರೇ ಇದೇನು ಛದ್ಮವೇಷ ಸ್ಪರ್ಧೆ ಅಂದುಕೊoಡ್ರಾ. ಖಂಡಿತಾ ಇಲ್ಲ. ಇವೆಲ್ಲವೂ ಸಹ ಜಾತ್ರೆಯೊಂದರಲ್ಲಿ ಕಂಡುಬoದ ಉತ್ಸವದಲ್ಲಿನ ದೃಶ್ಯಗಳು. ಈ ರೀತಿಯ ಭಿನ್ನ ವಿಭಿನ್ನ ಜಾತ್ರೆ ನಡೆದಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಅಮದಳ್ಳಿ ಗ್ರಾಮದಲ್ಲಿ. ಗ್ರಾಮದ ನಾರಾಯಣ ದೇವರ ಜಾತ್ರಾ ಮಹೋತ್ಸವವನ್ನ ಪ್ರತಿವರ್ಷ ನಡೆಸಲಾಗುತ್ತದೆ. ಹಾಲಕ್ಕಿ ಬುಡಕಟ್ಟು ಸಮಾಜದವರು ಕಾರ್ತಿಕ ಮಾಸದಲ್ಲಿ ಆಚರಿಸುವ ನಾರಾಯಣ ದೇವರ ಜಾತ್ರೆಯನ್ನ ದಿಂಡಿ ಜಾತ್ರೆಯೆಂದೇ ಕರೆಯುತ್ತಾರೆ. ಈ ಜಾತ್ರೆಯಲ್ಲಿ ಅಣುಕು ಪ್ರದರ್ಶನ ಮಾಡುವ ಹಗರಣ ಉತ್ಸವ ಆಯೋಜಿಸುವುದೇ ಇಲ್ಲಿನ ವಿಶೇಷ.
ಬ್ರಿಟೀಷರ ಕಾಲದಿಂದ ಹಾಲಕ್ಕಿ ಸಮುದಾಯದವರು ಈ ಹಗರಣ ಉತ್ಸವವನ್ನ ನಡೆಸಿಕೊಂಡು ಬರುತ್ತಿದ್ದಾರೆ. ಹಿಂದೆ ಬ್ರಿಟೀಷರ ದಬ್ಬಾಳಿಕೆಯನ್ನ ತಿಳಿಸಲು ಇಂಗ್ಲೀಷ್ ಭಾಷೆ ಬರದ ಹಿನ್ನಲೆ ಹಾಲಕ್ಕಿ ಸಮುದಾಯವರು ಹಗರಣ ಉತ್ಸವದ ಮೂಲಕ ಅಣುಕು ಪ್ರದರ್ಶನದಂತೆ ವೇಷತೊಟ್ಟು ಬ್ರಿಟೀಷಗೆ ತಿಳಿಸುತ್ತಿದ್ದರಂತೆ. ನಂತರದ ದಿನಗಳಲ್ಲಿ ಇದೊಂದು ಸಂಪ್ರದಾಯದoತೆ ನಡೆದುಕೊಂಡು ಬಂದಿದ್ದು ಪ್ರತಿವರ್ಷ ದಿಂಡಿ ಉತ್ಸವದಲ್ಲಿ ಆಕರ್ಷಣೆ ಉಂಟುಮಾಡುತ್ತವೆ.
ಇನ್ನು ಈ ಬಾರಿಯ ಹಗರಣ ಉತ್ಸವದಲ್ಲಿ ರಾಷ್ಟçಮಟ್ಟದಲ್ಲಿ ಸದ್ದು ಮಾಡಿರುವ ಕಾಂತಾರ ಚಿತ್ರದ ದೈವ ನರ್ತಕ, ಕೊರಗಜ್ಜ ಹಾಗೂ ಬೃಹತ್ ಗಾತ್ರದ ಪಂಜುರ್ಲಿ ನೆರೆದಿದ್ದ ಜನರ ಮೆಚ್ಚುಗೆಗೆ ಪಾತ್ರವಾದವು. ಇದರೊಂದಿಗೆ ಬೃಹತ್ ಗಾತ್ರದ ತೋಳ, ಕೋಸ್ಟ್ ಗಾರ್ಡ್ನ ವಿಮಾನ, ವಿವಿಧ ದೇವರ ಮಾದರಿಗಳನ್ನ ಸಹ ಪ್ರದರ್ಶಿಸಲಾಯಿತು. ಜೊತೆಗೆ ಕೋಣ, ಯಕ್ಷಗಾನ, ಅಯ್ಯಪ್ಪಸ್ವಾಮಿ ಮಹಿಮೆ ಸೇರಿದಂತೆ ಹತ್ತು ಹಲವು ಅಣುಕು ಪ್ರದರ್ಶನವನ್ನ ಮಾಡಲಾಯಿತು.
ಈ ಹಗರಣ ಉತ್ಸವದಲ್ಲಿ ಮಾಡುವ ಅಣುಕು ಪ್ರದರ್ಶನಕ್ಕೆ ತಿಂಗಳಿನಿoದ ತಯಾರಿ ಮಾಡಿಕೊಳ್ಳಬೇಕಿದ್ದು, ಯಾರ ಆರ್ಥಿಕ ಸಹಾಯವೂ ಇರುವುದಿಲ್ಲ. ಆದರೆ ಇಂದಿಗೂ ತಮ್ಮ ಸಮುದಾಯದ ಸಂಪ್ರದಾಯವನ್ನ ಬೆಳೆಸುವ ನಿಟ್ಟಿನಲ್ಲಿ ಹಾಲಕ್ಕಿ ಸಮುದಾಯದವರೇ ಈ ಉತ್ಸವವನ್ನ ನಡೆಸುತ್ತಾ ಬಂದಿದ್ದಾರೆ. ಇನ್ನು ಈ ಉತ್ಸವವನ್ನ ನೋಡುವುದಕ್ಕೆ ಅಂತಾನೇ ಅಕ್ಕಪಕ್ಕದ ಗ್ರಾಮಗಳ ನೂರಾರು ಮಂದಿ ಆಗಮಿಸುತ್ತಾರೆ. ಬಂದoತಹ ಪ್ರೇಕ್ಷಕರು ಪ್ರತಿಬಾರಿ ಪ್ರದರ್ಶಿಸುವ ವಿಭಿನ್ನ ವೇಷಗಳನ್ನ ನೋಡಿ ಫೋಟೋ, ವೀಡಿಯೋ ತೆಗೆದುಕೊಂಡು ಖುಷಿಪಡುತ್ತಾರೆ.
ಒಟ್ಟಿನಲ್ಲಿ ವಿವಿಧ ಬಗ್ಗೆ ಅಣುಕು ಪ್ರದರ್ಶನವನ್ನ ಪ್ರದರ್ಶಿಸುವ ಮೂಲಕ ಆಮದಳ್ಳಿ ಗ್ರಾಮದಲ್ಲಿ ನಡೆಯುವ ದಿಂಡಿ ಜಾತ್ರೆ ವಿಶೇಷ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇಂದಿಗೂ ತಮ್ಮ ಸಂಪ್ರದಾಯವನ್ನ ಉಳಿಸಲು ಹಾಲಕ್ಕಿ ಸಮುದಾಯವರು ಮಾಡುತ್ತಿರುವ ಈ ಹಗರಣ ಉತ್ಸವ ನಿಜಕ್ಕೂ ಶ್ಲಾಘನೀಯ.
ವಿಸ್ಮಯ ನ್ಯೂಸ್, ಕಾರವಾರ