ಬೈಕ್ ಕಳ್ಳತನ: ಮನೆ ಮುಂದೆ ನಿಲ್ಲಿಸಿಟ್ಟ ಬೈಕ್ ಕದ್ದವರಾರು?

ಅಂಕೋಲಾ: ಮನೆಯ ಹೊರಗಡೆ ನಿಲ್ಲಿಸಿಟ್ಟ ಮೋಟಾರ್ ಸೈಕಲ್ ಕಳ್ಳತನವಾಗಿರುವ ಕುರಿತು  ಅಂಕೋಲಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉತ್ತರ ಪ್ರದೇಶ ಮೂಲದ ಸೋನು ಪ್ರಜಾಪತಿ ತಂದೆ  ರಾಮಪ್ರಸಾದ ಪ್ರಜಾಪತಿ ಎಂಬಾತ ತನ್ನ ಮೋಟಾರ್ ಸೈಕಲ್ ಕಳ್ಳತನವಾಗಿರುವ ಕುರಿತು ದೂರು ನೀಡಿದ ವ್ಯಕ್ತಿಯಾಗಿದ್ದಾನೆ  ಈತನು ಕಳೆದ ಹಲವು ವರ್ಷಗಳಿಂದ ಅಂಕೋಲಾಕ್ಕೆ ಬಂದು ನೆಲೆಸಿದ್ದು,  ಇಲ್ಲಿಯೇ ಟೈಲ್ ಕೆಲಸ ಮಾಡಿಕೊಂಡಿದ್ದು,ಹಾಲಿ  ಬೊಬ್ರುವಾಡಾ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ (ಪಿ.ಎಂ . ಹೈ ಸ್ಕೂಲ್ ಹತ್ತಿರ) ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ದಿನಾಂಕ 26 – 11 – 2022 ರಂದು ತನ್ನ ಮನೆ ಮುಂದೆ ನಿಲ್ಲಿಸಿಟ್ಟ  ಹೀರೋ ಹೊಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ (KA30 L 5017 ) ನ್ನು ಯಾರೋ ಕಳ್ಳರು ಕದ್ದೊಯ್ದಿದ್ದರು.

ನಿಯಂತ್ರಣ ತಪ್ಪಿದ ಬೈಕ್: ಲಾರಿಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು

ಸ್ಥಳೀಯವಾಗಿ ಮತ್ತು ಅಂಕೋಲಾ ನಗರದಲ್ಲಿ  ಹುಡುಕಾಡಿದರೂ ಎಲ್ಲಿಯೂ ಸಿಗದೇ ಇದ್ದುದರಿಂದ,ಘಟನೆ ಬಗ್ಗೆ ಪರಿಚಯಸ್ಥರಲ್ಲಿ ವಿಚಾರಿಸಿ ಠಾಣೆಗೆ ದೂರು ನೀಡಲು ಬಂದಿರುವುದಾಗಿ ಸೋನು ಪ್ರಜಾಪತಿ ತನ್ನ ದೂರಿನಲ್ಲಿ ತಿಳಿಸಿದ್ದು, ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. .ಕಳ್ಳತನದ ಕೃತ್ಯದಲ್ಲಿ ಭಾಗಿಯಾದವರ ಕುರಿತಂತೆ ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದೆ ಎನ್ನಲಾಗಿದ್ದು,ಸ್ಥಳೀಯರ ಕೈವಾಡದ ಶಂಕೆಯು ವ್ಯಕ್ತವಾಗಿದೆ.ಪೊಲೀಸರು ತನಿಖೆ ಮುಂದುವರಿಸಿದ್ದಾರೆ.   

ವಿಸ್ಮಯ ನ್ಯೂಸ್ ವಿಲಾಸ  ನಾಯಕ ಅಂಕೋಲಾ

Exit mobile version