Focus NewsImportant
Trending
ಬೈಕ್‌ನ್ನು ನಿಲ್ಲಿಸಿ ಮೂತ್ರವಿಸರ್ಜನೆ ಮಾಡುತ್ತಿದ್ದ ವೇಳೆ ಡಿಕ್ಕಿ ಹೊಡೆದ ಕಂಟೇನರ್: ವ್ಯಕ್ತಿ ಸ್ಥಳದಲ್ಲೇ ಸಾವು
ಯಲ್ಲಾಪುರ: ಕಂಟೇನರ್ ಡಿಕ್ಕಿಹೊಡೆದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಪಟ್ಟಣದ ಹೊರವಲಯದ ಮಾಗೋಡ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ನಡೆದಿದೆ. ವ್ಯಕ್ತಿ ತನ್ನ ಎಕ್ಸೆಲ್ ಲೂನಾವನ್ನು ಹೆದ್ದಾರಿ ಬದಿಗೆ ನಿಲ್ಲಿಸಿ, ಮೂತ್ರ ವಿಸರ್ಜನೆ ಮಾಡುತ್ತಿರುವಾಗ, ಯಲ್ಲಾಪುರ ಕಡೆಯಿಂದ ಅತಿವೇಗದಿಂದ ಬಂದ ಕಂಟೇನರ್ ವಾಹನವು ಡಿಕ್ಕಿಹೊಡೆದಿದೆ. ಈ ವೇಳೆ ವ್ಯಕ್ತಿಯು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮನೆ ಗೋಡೆ ಕುಸಿತ : ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಇಬ್ಬರ ದುರ್ಮರಣ
ದುರ್ಘಟನೆ ನಡೆದರೂ ಕಂಟೇನರ್ ಚಾಲಕನು ವಾಹನವನ್ನು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದಾನೆ. ಮೃತಪಟ್ಟ ವ್ಯಕ್ತಿಯನ್ನು ಇಡಗುಂದಿ ಸಮೀಪದ ಬೆಟಗೇರಿ ದೋಣಗಾರ ಗ್ರಾಮದ ಕೃಷಿಕ ನಾರಾಯಣ ಕೃಷ್ಣ ಭಟ್ಟ ( 54 ) ಗುರುತಿಸಲಾಗಿದೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್, ಕಾರವಾರ