ಕುಮಟಾ: ಹಿರೇಗುತ್ತಿ ಮಹಾತ್ಮಾಗಾಂಧೀ ಆಂಗ್ಲಮಾಧ್ಯಮ ಶಾಲೆಯಲ್ಲಿ ಮಹಾತ್ಮಾಗಾಂಧಿ ವಿದ್ಯಾವರ್ಧಕ ಸಂಘದಿoದ ಐ.ಡಿ ಕಾರ್ಡ ವಿತರಿಸಲಾಯಿತು. ಸಮಾರಂಭವನ್ನು ಮಹಾತ್ಮಾಗಾಂಧಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಹೊನ್ನಪ್ಪ ಎನ್ ನಾಯಕ ಉದ್ಘಾಟಿಸಿ ಮಾತನಾಡಿ “ಸಮುದಾಯ ಸಂಘ ಸಂಸ್ಥೆಗಳು ಶೈಕ್ಷಣಿಕ ಅಗತ್ಯಗಳಿಗೆ ದಾನಿಗಳ ನೆರವಾಗಬೇಕೆಂಬ ಉದ್ದೇಶದಿಂದ ನಮ್ಮ ಕಾನ್ವೆಂಟ್ ವಿದ್ಯಾರ್ಥಿಗಳಿಗೆ ಐಡಿ ಕಾರ್ಡ ನಮ್ಮ ಆಡಳಿತ ಮಂಡಳಿಯಿoದ ನೀಡಿದ್ದೇವೆ. ನಮ್ಮ ಮಹಾತ್ಮಾಗಾಂಧಿ ವಿದ್ಯಾವರ್ಧಕ ಸಂಘ ಸೇವೆಯ ಪ್ರತಿಫಲ ಸೇವೆ ಎಂಬoತೆ ಕಾರ್ಯನಿರ್ವಹಿಸುತ್ತಿದೆ” ಎಂದರು.
ಶ್ರೀ ಆರ್.ಎಚ್ ನಾಯಕ ಕುಮಟಾ ಕಾಂಗ್ರೇಸ್ ಮುಖಂಡರು ಇವರು ಮಾತನಾಡಿ “ಮಹಾತ್ಮಾಗಾಂಧೀ ಆಂಗ್ಲಮಾಧ್ಯಮ ಶಾಲೆಯು ಒಳ್ಳೆಯ ಶಿಕ್ಷಣವನ್ನು ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಮಕ್ಕಳಿಗೆ ಉಜ್ವಲ ಭವಿಷ್ಯವನ್ನು ರೂಪಿಸುವಂತಾಗಲಿ, ಶಿಕ್ಷಣ ಕ್ಷೇತ್ರಕ್ಕೆ ನಮ್ಮ ಸಹಾಯ, ಸಹಕಾರ ಯಾವತ್ತೂ ಇರುತ್ತದೆ” ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶ್ರೀ ರವಿ ಎಸ್ ಶೆಟ್ಟಿ ಕವಲಕ್ಕಿ ಕಾಂಗ್ರೆಸ್ ಮುಖಂಡರು “ಸೇವೆಯ ಪ್ರತಿಫಲ ಸೇವೆ ಎಂಬoತೆ ಮಹಾತ್ಮಾಗಾಂಧಿ ವಿದ್ಯಾವರ್ಧಕ ಸಂಘ ಮುಂದಿನ ದಿನಗಳಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಇನ್ನೂ ಹೆಚ್ಚಿನ ಸಾಮಾಜಿಕ ಸೇವಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವಂತಾಗಲಿ” ಎಂದರು.
ಮಹಾತ್ಮಾಗಾಂಧಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಮೋಹನ ಬಿ ಕೆರೆಮನೆ ಮಾತನಾಡಿ “ಶಿಕ್ಷಣ ಕಾರ್ಯದಲ್ಲಿ ಬಾಲಕ-ಪಾಲಕ-ಶಿಕ್ಷಕ ಕಾಯಾ, ವಾಚಾ, ಮನಸ್ಸಾ ತೊಡಗಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ಯಶಸ್ಸು ಪಡೆಯಲು ಸಾಧ್ಯ ನಮ್ಮ ಇಂಗ್ಲೀಷ ಮೀಡಿಯಂ ಸ್ಕೂಲ್ ಆಧುನಿಕತೆಗೆ ತಕ್ಕಂತೆ ಶಿಕ್ಷಣ ನೀಡುತ್ತಿರುವುದು ನನಗೆ ತುಂಬಾ ಹೆಮ್ಮೆ ಅನಿಸಿದೆ” ಎಂದರು. ಸಮಾರಂಭದ ವೇದಿಕೆಯಲ್ಲಿ ಬಾಲಚಂದ್ರ ನಾಯಕ ಅಡಿಗೋಣ, ಮಹಾತ್ಮಾಗಾಂಧೀ ಆಂಗ್ಲಮಾಧ್ಯಮ ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀಮತಿ ಸುಮನ್ ಫರ್ನಾಂಡೀಸ್, ಶಿಕ್ಷಕಿಯರಾದ ವಸಂತಬಾಯಿ, ಜಯಶ್ರೀ ಪಟಗಾರ, ತನುಜಾ ಹರಿಕಂತ್ರ ಉಪಸ್ಥಿತರಿದ್ದರು. ಶಿಕ್ಷಕಿ ಜಯಶ್ರೀ ಪಟಗಾರ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ವಸಂತಬಾಯಿ ವಂದಿಸಿದರು. ಗೋವಿಂದ ನಾಯ್ಕ ಸಹಕರಿಸಿದರು.
ವಿಸ್ಮಯ ನ್ಯೂಸ್, ಕುಮಟಾ