ಸಮುದ್ರ ದಂಡೆಯ ಮೇಲೆ ಮದ್ಯದ ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ: ಅಸ್ವಸ್ಥನಾಗಿ ಬಿದ್ದಿದ್ದ ವ್ಯಕ್ತಿಯ ರಕ್ಷಣೆ

ಗೋಕರ್ಣ: ಯಾವುದೋ ಒಂದು ವಿಷಯವನ್ನು ಮನಸ್ಸಿಗೆ ಹೆಚ್ಚಿಕೊಂಡು ಕುಮಟಾದ ವ್ಯಕ್ತಿಯೋರ್ವರು ಗೋಕರ್ಣದಲ್ಲಿ ಮದ್ಯದ ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ. ವಸಂತ ದತ್ತಾತ್ರೇಯ ಭಟ್ ಕುಮಟಾದ ಮದ್ಗುಣಿ ಮೂಲದವರಾಗಿದ್ದು ತಮ್ಮ ವಯಕ್ತಿಕ ವಿಷಯಕ್ಕೆ ಮನನೊಂದು ವಿಪರೀತ ಮದ್ಯದ ಜೊತೆ ವಿಷವನ್ನು ಸೇವಿಸಿದಾಗ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.

KVS Recruitment 2022: ಭರ್ಜರಿ ಉದ್ಯೋಗಾವಕಾಶ: 13 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ: 35 ಸಾವಿರದಿಂದ 2 ಲಕ್ಷದ ವರೆಗೆ ಮಾಸಿಕ ವೇತನ

ಸಮುದ್ರದ ದಡದಲ್ಲಿ ಅಸ್ವಸ್ಥನಾಗಿ ಬಿದ್ದಿದಂತ ವ್ಯಕ್ತಿಯನ್ನು, ಗೋಕರ್ಣ ಪೊಲೀಸ್ ರ ಹಾಗು ಸ್ಥಳೀಯ ಹೊಟೆಲ್ ಮಾಲಿಕರು ಮತ್ತು ಸಾಮಾಜಿಕ ಕಾರ್ಯಕರ್ತ ವಿಶಾಲ ನಾಯಕ ಅವರ ಸಹಾಯದಿಂದ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆಯನ್ನು ನೀಡಿ ಅಲ್ಲಿಂದ ಕುಮಟಾದ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸೇರಿಸಲಾಗಿದೆ.

ವಿಸ್ಮಯ ನ್ಯೂಸ್, ಗೋಕರ್ಣ

Exit mobile version