Follow Us On

WhatsApp Group
Big NewsImportant
Trending

ಈಜಲು ತೆರಳಿದ ವೇಳೆ ಅಲೆಗಳ ರಭಸಕ್ಕೆ ಸಿಲುಕಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ

ಗೋಕರ್ಣ : ಮೋಜು ಮಸ್ತಿಗಾಗಿ ಬರುವ ಪ್ರವಾಸಿಗರು ಎಷ್ಟೆ ಎಚ್ಚರಿಕೆ ನೀಡಿದರೂ, ಕೇಳದೆ ಸಮುದ್ರಕ್ಕೆ ಇಳಿದು ಅಪಾಯಕ್ಕೆ ಸಿಲುಕಿಕೊಳ್ಳುತ್ತಿರುವ ಪ್ರಕರಣ ಹೆಚ್ಚುತ್ತಲೇ ಇದೆ. ಹೌದು, ತಾಲೂಕಿನ ಕುಡ್ಲೆ ಕಡಲಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಲೈಫ್ ಗಾರ್ಡ್ ಮತ್ತು ಗೃಹ ರಕ್ಷಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬೆಂಗಳೂರು ಮೂಲದ ಐಟಿ ಕಂಪನಿಯ ಉದ್ಯೋಗಿಗಳಾದ ಯಶ್ (26) ಮತ್ತು ಶೇಜನ್ (26) ಎಂಬುವವರು ಗೋಕರ್ಣ ಪ್ರವಾಸಕ್ಕೆ ಬಂದಿದ್ದು, ಈ ವೇಳೆ ಕುಡ್ಲೆ ಕಡಲತೀರದಲ್ಲಿ ಈಜಲು ತೆರಳಿದ್ದರು. ಆದರೆ, ಅಲೆಗಳ ರಭಸಕ್ಕೆ ಮುಳುಗುವ ಹಂತ ತಲುಪಿದ್ದರು.

ಬೈಕ್, ಸೈಕಲ್ ನಡುವೆ ಅಪಘಾತ: ಬೈಕ್ ಸವಾರ ಸಾವು

ಇದನ್ನು ಗಮನಿಸಿದ ಲೈಫ್ ಗಾರ್ಡ್ ಮತ್ತು ಗೃಹರಕ್ಷಕ ಸಿಬ್ಬಂದಿ ತಕ್ಷಣ ಧಾವಿಸಿ, ಇವರಿಬ್ಬರನ್ನು ಪ್ರಾಣಾಪಾಯದಿಂದ ರಕ್ಷಣೆ ಮಾಡಿದ್ದಾರೆ. ಲೈಫ್ ಗಾರ್ಡ್ ನಾಗೇಂದ್ರ ಮತ್ತು ಗೃಹ ರಕ್ಷಕ ದಳದ ಶೇಖರ್ ಎಂಬುವವರು ಪ್ರವಾಸಿಗರನ್ನು ರಕ್ಷಣೆ ಮಾಡಿ, ಜೀವ ಉಳಿಸಿದ್ದಾರೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಗೋಕರ್ಣ

Back to top button