Focus News
Trending

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷದ ಟಿಕೇಟ್ ಕೇಳಲು ಎಲ್ಲರೂ ಸ್ವತಂತ್ರರು: ಮಾಜಿ ಶಾಸಕಿ ಶಾರದಾ ಶೆಟ್ಟಿ

ಹೊನ್ನಾವರ : ಭಾರತದಂತಹ ಪ್ರಜಾಪ್ರಭುತ್ವರಾಷ್ಟçದಲ್ಲಿ ಪಕ್ಷದಟಕೇಟ್ ಕೇಳಲು ಸರ್ವರೂ ಸ್ವತಂತ್ರರುಎAದು ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ ನುಡಿದರು. ಅವರು ಹೊನ್ನಾವರ ಬ್ಲಾಕ್‌ಕಾಂಗ್ರೆಸ್ ಸಮಿತಿ ಪಟ್ಟಣದ ಸೊಶಿಯಲ್ ಕ್ಲಬ್ ಸಭಾಭವನದಲ್ಲಿ ಪರೇಶ್ ಸಾವಿನ ಮರುತನಿಖೆಗೆಒತ್ತಾಯಿಸುತ್ತಿರುವ ಬಿ.ಜೆ.ಪಿ.ಮುಖಂಡರಸೋಗಲಾಡಿತನವನ್ನು ಬಹಿರಂಗ ಪಡಿಸುವಕುರಿತಂತೆ ನಡೆದಜನಜಾಗೃತಿ ಸಭೆಯಲ್ಲಿ ಪಕ್ಷದಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷದಂತಹಅತೀದೊಡ್ಡ ಪಕ್ಷದಲ್ಲಿ,ಮುಂದೆ ನಡೆಯುವಕರ್ನಾಟಕ ವಿಧಾನ ಸಭಾಚುನಾವಣೆಗೆ ನಮ್ಮಕ್ಷೇತ್ರದಿಂದ ಸ್ಪರ್ಧಿಸಲು ಬಯಸುವ ಆಕಾಂಕ್ಷಿಗಳು ಸಾಕಷ್ಟಿರಬಹುದು. ಆದರೆ ಪಕ್ಷದಚುನಾವಣಾಆಯ್ಕೆ ಸಮಿತಿ,ಯಾರಿಗೇ ಟಿಕೇಟ್ ನೀಡಿದರೂ,ನಾವೆಲ್ಲರೂ ಪಕ್ಷದ ತೀರ್ಮಾನಕ್ಕೆ ಬದ್ದರಾಗಿ,ಪಕ್ಷದ ಗೆಲುವಿಗಾಗಿ ಹೋರಾಡುತ್ತೇವೆ ಎಂದು ಹೇಳಿದರು.

ಉತ್ತರಕನ್ನಡಜಿಲ್ಲಾಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಮಾತನಾಡುತ್ತಾರಾಜ್ಯದಲ್ಲಿಅಧಿಕಾರ ನಡೆಸುತ್ತಿರುವ ಬಿ.ಜೆ.ಪಿ.ಸರಕಾರಕ್ಕೆಯಾವುದೇ ಜನಪರ ಕಾಳಜಿ ಇಲ್ಲಾ.ಕೇವಲ ಜಾತಿ,ಧರ್ಮದ ನಡುವೆ ವಿಷ ಬೀಜವನ್ನು ಬಿತ್ತಿಚುನಾವಣೆಗೆಲ್ಲುವುದೊಂದೇ ಅವರ ಕಾರ್ಯವಾಗಿದ್ದು, ಪರೇಶ ಮೇಸ್ತ ಸಾವನ್ನು ಕಳೆದ ಚುನಾವಣೆಯಲ್ಲಿ ಬಿ.ಜೆ.ಪಿ.ಬಳಸಿಕೊಂಡಿದ್ದನ್ನು ಎಳೆಎಳೆಯಾಗಿ ಕಾರ್ಯಕರ್ತರಿಗೆ ವಿವರಿಸಿ ಮುಂದಿನ ದಿನದಲ್ಲಿ ಈ ವಿಷಯವನ್ನು ಪ್ರತಿ ಮತಗಟ್ಟೆಗೆತಲುಪಿಸುವ ಮೂಲಕ ಜನರಲ್ಲಿಜಾಗೃತಿ ಮೂಡಿಸುವಂತೆಕರೆ ನೀಡಿದರು.

ಹೊನ್ನಾವರ ಬ್ಲಾಕ್‌ಕಾಂಗ್ರೆಸ್‌ಅಧ್ಯಕ್ಷಜಗದೀಪ್‌ಎನ್‌ ತೆoಗೇರಿ ಮಾತನಾಡಿ ಪರೇಶ್ ಮೇಸ್ತ ಸಾವಿನ ದಿನವನ್ನು ಮತೀಯ ವಾದಿಗಳು ಬಳಸಿಕೊಂಡ ರೀತಿ ಹಾಗೂ ಆನಂತರಜಿಲ್ಲೆಯಾದ್ಯoತ ಬುಗಿಲೆದ್ದ ಹಿಂಸಾಚಾರವನ್ನು ನೆನಪಿಸಿದರು.ಪರೇಶ್ ಮೇಸ್ತ ಸಾವಿನ ನಂತರ ಹೊನ್ನಾವರ ಪಟ್ಟಣ ಮತ್ತು ಹೊನ್ನಾವರ ಬ್ಲಾಕ್ ಮಟ್ಟದಲ್ಲಿ ಪಕ್ಷ ಸಂಘಟಿಸುವುದು ಸವಾಲಿನ ಕಾರ್ಯವಾಗಿತ್ತು.ಆದರೂ ಕೋಮುವಾದಿಗಳನ್ನು ಧೈರ್ಯದಿಂದ ಎದುರಿಸಿ,ಎಲ್ಲಾಕಾರ್ಯಕರ್ತರ ಸಹಕಾರದಿಂದ ಪಕ್ಷವನ್ನು ಹೊನ್ನಾವರ ಭಾಗದಲ್ಲಿ ಜೀವಂತವಾಗಿರಿಸಿದ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಪರೇಶ್ ಮೇಸ್ತ ಸಾವಿನ ನ್ಯಾಯಯುತವಾದತನಿಖೆಗೆ ಒತ್ತಾಯಿಸಿ ಹೊನ್ನಾವರ ಬ್ಲಾಕ್‌ಕಾಂಗ್ರೆಸ್‌ಜೊತೆ ಉಪವಾಸ ಸತ್ಯಾಗ್ರಹ ನಡೆಸಿ ಕೆಲ ತಿಂಗಳ ಹಿಂದೆ ನಿಧನ ಹೊಂದಿದ ಕಾoಗ್ರೆಸ್ ಪಕ್ಷದ ಮುಖಂಡರಾದ ಪಟ್ಟಣದ ತುಳಸಿನಗರದ ನಾಗರಾಜ ಮೇಸ್ತಾ ಮತ್ತುರಥಬೀದಿಯ ತುಳಸಿದಾಸ ಪುಲ್ಕರ್ ಮತ್ತು ಪರೇಶ್ ಮೇಸ್ತನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನಾಚರಿಸುವ ಮೂಲಕ ಅವರಆತ್ಮಕ್ಕೆ ಶಾಂತಿ ಕೋರಲಾಯಿತು.

ಹೊನ್ನಾವರ ಬ್ಲಾಕ್ ಮಹಿಳಾ ಕಾಂಗ್ರೆಸ್‌ಅಧ್ಯಕ್ಷೆ ಶ್ರೀಮತಿ ಪುಷ್ಪಾ ಮಹೇಶ್, ಬ್ಲಾಕ್‌ಕಾಂಗ್ರೆಸ್ ಕಾರ್ಯದರ್ಶಿ ಸುರೇಶ ಮೇಸ್ತ ಸಂಘಟನೆಯನ್ನು ಬಲಪಡಿಸುವುದರಕುರಿತಂತೆ ಮಾತನಾಡಿದರು. ವೇದಿಕೆಯಲ್ಲಿ ಕೆ.ಪಿ.ಸಿ.ಸಿ.ಸದಸ್ಯ ಎಂ.ಎನ್.ಸುಬ್ರಮಣ್ಯ, ಹಿಂದುಳಿದ ವರ್ಗ ವಿಭಾಗದಅಧ್ಯಕ್ಷಕೆ.ಎಚ್.ಗೌಡ,ಜಿಲ್ಲಾಕಾಂಗ್ರೆಸ್ ಸೇವಾದಳದ ಪ್ರಧಾನ ಕಾರ್ಯದರ್ಶಿ ಕೃಷ್ಣ ಮಾರಿಮನೆ, ಸೇವಾದಳದ ಅಧ್ಯಕ್ಷ ಮೋಹನ ಆಚಾರಿ, ಜಿಲ್ಲಾ ಕಾಂಗ್ರೆಸ್‌ ಇoಟೆಕ್ ಪ್ರಧಾನ ಕಾರ್ಯದರ್ಶಿ ಕೇಶವ ಮೇಸ್ತ, ಪರಿಶಿಷ್ಟ ಜಾತಿ ವಿಭಾಗದಅಧ್ಯಕ್ಷ ಕೃಷ್ಣ ಹರಿಜನ, ಅಲ್ಪಸಂಖ್ಯಾತ ವಿಭಾಗದಅಧ್ಯಕ್ಷಜಕ್ರಿಯ್ಯಾ ಶೇಖ,ಇಂಟೆಕ್‌ಅಧ್ಯಕ್ಷಆಗ್ನೆಲ್‌ಡಯಾಸ್,ಬಿ.ಸಿ.ಸಿ.ಉಪಾಧ್ಯಕ್ಷದಾಮೋದರ ನಾಯ್ಕ ಉಪಸ್ಥಿತರಿದ್ದರು.ಬಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಲಂಭೋದರ ನಾಯ್ಕಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Back to top button