Follow Us On

WhatsApp Group
Important
Trending

ಹಿಂದುತ್ವ ಮತ್ತು ರಾಷ್ಟçಭಕ್ತಿ ಜಾಗೃತವಾಗಬೇಕಿದೆ: ಸಿ.ಟಿ ರವಿ

ಕುಮಟಾ: ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿರುವ ಸನ್ಮಾನ್ಯ ಸಿ. ಟಿ. ರವಿ ಅವರು ಇಂದು ಉತ್ತರಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಕೈಗೊಂಡಿದ್ದರು. ಈ ನಡುವೆ ಪಕ್ಷದ ಕುಮಟಾ ಕಾರ್ಯಾಲಯಕ್ಕೆ ಅವರನ್ನು ಆಹ್ವಾನಿಸಲಾಗಿತ್ತು. ಕುಮಟಾದ ಬಿಜೆಪಿ ಕಾರ್ಯಾಲಯಕ್ಕೆ ಭೇಟಿನೀಡಿದ ಮಾನ್ಯ ಸಿ.ಟಿ. ರವಿ ಅವರನ್ನು ಕುಮಟಾ ಮಂಡಲದ ವತಿಯಿಂದ ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕರಾಗಿರುವ ಮಾನ್ಯ ದಿನಕರ ಶೆಟ್ಟಿಯವರು ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆ ನೀಡಿದರು.

ಜನವಸತಿ ಪ್ರದೇಶಗಳಲ್ಲಿ ಹೆಜ್ಜೇನು ಕಾಟ: ಜನರ ಮೇಲೆ, ಸಾಕು ಪ್ರಾಣಿಗಳ ಮೇಲೆ ದಾಳಿ : ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

ಇದೇ ಸಂದರ್ಭದಲ್ಲಿ ಕುಮಟಾ ಮಂಡಲದಲ್ಲಿ ಹಲವು ವರ್ಷಗಳಿಂದ ಪಕ್ಷಸಂಘಟನೆಗೆ ಅಪಾರ ಸೇವೆಸಲ್ಲಿಸಿ, ಈಗ ತಮ್ಮ ತವರುಜಿಲ್ಲೆಯಾದ ಉಡುಪಿಗೆ ತೆರಳುತ್ತಿರುವ ಸಂಘಟನೆಯ ಹಿರಿಯ ಕಾರ್ಯಕರ್ತ ಶ್ರೀ ಮಹಾಬಲ ಶೆಟ್ಟಿ ಅವರಿಗೆ ಮಾನ್ಯ ಸಿ. ಟಿ. ರವಿ ಅವರು ಸನ್ಮಾನಿಸಿ ನೆನಪಿನ ಕಾಣಿಕೆ ಕೊಟ್ಟು ಗೌರವಿಸಿದರು.

ಭಾರತೀಯ ಜನತಾ ಪಾರ್ಟಿಯ ಉತ್ತರಕನ್ನಡ ಜಿಲ್ಲಾ ಅಧ್ಯಕ್ಷ ಶ್ರೀ ವೆಂಕಟೇಶ ನಾಯಕ, ಕುಮಟಾ ಮಂಡಲದ ಅಧ್ಯಕ್ಷ ಶ್ರೀ ಹೇಮಂತಕುಮಾರ ಗಾಂವಕರ, ಪುರಸಭಾ ಅಧ್ಯಕ್ಷೆ ಶ್ರೀಮತಿ ಅನುರಾಧಾ ಬಾಳೇರಿ, ಪಕ್ಷದ ಪ್ರಮುಖರಾದ ಶ್ರೀ ವಿನೋದ ಪ್ರಭು, ಪಶ್ಚಿಮ ಘಟ್ಟ ಕಾರ್ಯಪಡೆ ನಿಗಮ ಅಧ್ಯಕ್ಷರಾದ ಶ್ರೀ ಗೋವಿಂದ ನಾಯ್ಕ, ಡಾ|| ಜಿ. ಜಿ. ಹೆಗಡೆ, ಶ್ರೀ ಕುಮಾರ ಮಾರ್ಕಾಂಡೆ, ಶ್ರೀ ಪ್ರಶಾಂತ ನಾಯ್ಕ, ಶ್ರೀ ಮಹಾಬಲ ಶೆಟ್ಟಿ, ಹಾಗೂ ಪಕ್ಷದ ವಿವಿಧ ಮೋರ್ಚಾ ಮತ್ತು ಪ್ರಕೋಷ್ಠಗಳ ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು

ವಿಸ್ಮಯ ನ್ಯೂಸ್, ಕುಮಟಾ

Back to top button