Important
Trending

ಒಂದುವರೆ ಸಾವಿರ ರೂಪಾಯಿ ಮದ್ಯದ ಆಸೆಗೆ ಬಿದ್ದು ಪೊಲೀಸರ ಅತಿಥಿಯಾದ ಯುವಕರು

ಕುಮಟಾ: ಕೋಲ್ಡ್ರಿಂಕ್ಸ್ ವಾಹನವೊಂದರಲ್ಲಿ ಅಕ್ರಮವಾಗಿ ಗೋವಾ ಮದ್ಯವನ್ನು ಸಾಗಿಸುತ್ತಿರುವಾಗ ದಾಳಿ ನಡೆಸಿದ ಪೊಲೀಸರು, ಅಕ್ರಮ ಗೋವಾ ಮದ್ಯದ ಜೊತೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಕುಮಟಾದಲ್ಲಿ ನಡೆದಿದೆ. ತಾಲೂಕಿನ ಹರ್ಕಡೆ ನಿವಾಸಿ ಕೃಷ್ಣ ಗೌಡ ಮತ್ತು ಮೂರೂರು ಕೋಟೆಹಕ್ಕಲ ನಿವಾಸಿ ಮಾರುತಿ ಮುಕ್ರಿ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.

18 ದೇವಸ್ಥಾನಗಳಲ್ಲಿ ಕಳ್ಳತನ: ಖರ್ತರ್ನಾಕ್ ಕಳ್ಳರು ಅಂದರ್: ಪಾಠ ಮಾಡಬೇಕಾದ ಶಿಕ್ಷಕನೇ ಕಳ್ಳತನಕ್ಕೆ ಇಳಿದಿದ್ದ!

ಕೋಲ್ಡ್ ಡ್ರಿಂಕ್ಸ್ ನಡುವೆ ಇದ್ದ ಸುಮಾರು 1,540 ರೂ. ಮೌಲ್ಯದ ಗೋವಾ ಮದ್ಯವನ್ನು ವಶಪಡಿಸಿಕೊಂಡ ಪೊಲೀಸರು, ಕಳ್ಳ ಸಾಗಾಣಿಕೆಗೆ ಬಳಸಲಾದ ವಾಹನವನ್ನು ಜಪ್ತಿಮಾಡಿದ್ದಾರೆ. ಬಂಧಿತ ಇಬ್ಬರು ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

ವಿಸ್ಮಯ ನ್ಯೂಸ್, ಕುಮಟಾ

Related Articles

Back to top button