Important
Trending

ಉಳವಿಯಲ್ಲಿ ಉತ್ತರಕನ್ನಡ ಜಿಲ್ಲಾ 22 ನೇ ಕನ್ನಡ ಸಾಹಿತ್ಯ ಸಮ್ಮೆಳನ: ಅದ್ಧೂರಿಯಾಗಿ ನಡೆದ ಕಾರ್ಯಕ್ರಮ

ಜೋಯ್ಡಾ: ಉಳವಿಯನ್ನು ನೋಡಬೇಕೆಂಬ ಬಹುದಿನಗಳ ಹಂಬಲ ಇಂದು ಈಡೇರಿದೆ. ಶಿವ ಶರಣ ಚೆನ್ನಬಸವಣ್ಣ ನೆಲೆ ನಿಂತ ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರ, ವಚನ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ಈ ಉಳವಿ ಕ್ಷೇತ್ರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನ ನಡೆಯುತ್ತಿರುವುದು ಅರ್ಥಪೂರ್ಣವಾದ ಚಾರಿತ್ರಿಕ ಘಟನೆಯಾಗಿದೆ. ಈ ಸಾಹಿತ್ಯ ಸಮ್ಮೆಳನದ ಅಧ್ಯಕ್ಷನಾಗುವ ಸುವರ್ಣ ಅವಕಾಶ ದೊರೆತುದಕ್ಕಾಗಿ ನಿಮ್ಮೆಲ್ಲರಿಗೆ ಶರಣು ಶರಣು ಎಂದು ಶಾಂತಾರಾಮ ನಾಯಕ,ಹಿಚಕರ ಹೇಳಿದರು.

Railway Recruitment 2022: ಒಟ್ಟು 2422 ಹುದ್ದೆಗಳಿಗೆ ನೇಮಕಾತಿ: SSLC, ITI, PUC ಆದವರು ಅರ್ಜಿ ಸಲ್ಲಿಸಬಹುದು

ಅವರು ಶನಿವಾರ ಜೊಯಿಡಾ ತಾಲೂಕಿನ ಉಳವಿಯಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ 22 ನೇ ಕನ್ನಡ ಸಾಹಿತ್ಯ ಸಮ್ಮೆಳನದ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೆಳನಾಧ್ಯಕ್ಷರಾಗಿ ಮಾತನಾಡಿದರು. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ ಆದಿ ಕವಿ ಪಂಪ ಕಂಡ ನಾಡು ಇದು ನಮ್ಮ ಕನ್ನಡ ನಾಡು.ಶಾಂತಾರಾಮ ನಾಯ್ಕ ಅವರ ಜಿಲ್ಲಾ ಸಮ್ಮೆಳನಾಧ್ಯಕ್ಷರ ಆಯ್ಕೆ ಇದು ಕನ್ನಡ ನಾಡಿಗೆ ನೀಡಿದ ಗೌರವ . ಸಾಹಿತ್ಯಕ್ಕೆ,ಕನ್ನಡ ಭಾಷೆಗೆ ಚಿಲುಮೆ ಕೊಟ್ಟಂತ ದೀಮಂತ ವ್ಯಕ್ತಿ ಇವರು. ಕನ್ನಡ ನಾಡನ್ನು ಒಡೆಯುವ ದುಃಷ್ಟ ಶಕ್ತಿಗಳಿಗೆ ದಿಟ್ಟ ಉತ್ತರ ನೀಡುವ ನಿರ್ಣಯ ಸಮ್ಮೆಳನದಲ್ಲಾಗಲಿ ಎಂದರು.

ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್ ನಾಗಮೋಹನದಾಸ್ ಮಾತನಾಡಿ ನುಡಿದಂತೆ ಬರೆದವರು.ಬರೆದಂತೆ ಬದುಕಿದವರು ಶಾಂತಾರಾಮ ನಾಯಕ ಅವರು.ಪ್ರಜಾ ಪ್ರಭುತ್ವ ,ಜಾತ್ಯಾತಿತತೆ,ಸಾಮಾಜಿಕ ನ್ಯಾಯಕ್ಕೆ ಗೌರವ ನೀಡುವ ಕಾರ್ಯ ಕಸಾಪ ಮಾಡುತ್ತಿದೆ. ಜೊಯಿಡಾದ ಆದಿವಾಸಿಗಳ ಬಡತನ ನಿವಾರಣೆ ಮಾಡುವ ಕಾರ್ಯ ಮಾಡಬೇಕು.ಬಹುತೇಕ ಕಾನೂನುಗಳು ಇಂಗ್ಲಿಷ್ ನಲ್ಲಿದೆ. ಇದು ಕನ್ನಡಿಕರಣ ಮಾಡಿ ಸಾಮಾನ್ಯ ಜನರಿಗೆ ಕಾನೂನು ಅರಿವು ತಿಳಿಯಪಡಿಸುವ ಕೆಲಸ ಅಗಬೇಕು ಎಂದು ಹೆಳಿದರು.

ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷರಾದ ಶಾಂತಾರಾಮ ನಾಯಕ ಹಿಚಕಡ,ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್ ನಾಗಮೋಹನದಾಸ,ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ,ಮಾಜಿ ಸಚಿವ ಸುನಿಲ ಹೆಗಡೆ,ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್ ವಾಸರೆ,ಉಳವಿ ಟ್ರಸ್ಟ್ ಉಪಾಧ್ಯಕ್ಷ ಸಂಜಯ ಕಿತ್ತೂರ,ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸೈಯದ್ ಝಮೀರುಲ್ಲಾ ಷರೀಪ್,ಎನ್.ಅರ್ ನಾಯ್ಕ,ವಿಷ್ಣು ನಾಯ್ಕ,ರೋಹಿದಾಸ ನಾಯ್ಕ ,ಭಾಗಿರತಿ ಹೆಗಡೆ, ಉಳವಿ ಗ್ರಾ.ಪಂ ಅಧ್ಯಕ್ಷೆ ಮಂಗಲಾ ಮಿರಾಶಿ,ಉಪಾಧ್ಯಕ್ಷ ಮಂಜುನಾಥ ಮೊಖಾಶಿ ಮುಂತಾದವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಜೋಯ್ಡಾ

Back to top button