ಚಪ್ಪಲಿ ತುಂಬುವ ಬಾಕ್ಸ್ ನಲ್ಲಿ ರಸ್ತೆಯ ಪಕ್ಕದಲ್ಲಿ ನವಜಾತ ಶಿಶು ಪತ್ತೆ : ಹೆತ್ತತಾಯಿಗೆ ಬೇಡವಾದ ಮಗು

ಸಿದ್ದಾಪುರ: ನವಜಾತ  ಮಗುವನ್ನು  ರಸ್ತೆ ಬದಿಯ ಕಾಡಿನಲ್ಲಿ  ಬಿಟ್ಟು ಹೋದ ಘಟನೆ ತಾಲೂಕಿನ ತ್ಯಾರ್ಸಿ ಬಳಿ  ನಡೆದಿದೆ. ಕುಮಟಾ ಮುಖ್ಯರಸ್ತೆಯ  ಗುಡ್ಡೆಕೊಪ್ಪದ ರಸ್ತೆ ಬದಿಯ ಕಾಡಿನಲ್ಲಿ  ರಟ್ಟಿನ ಬಾಕ್ಸಿನಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ನಡೆದಿದೆ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಮಗುವಿನ  ಅಳುವ ಸದ್ದು ಕೇಳಿದ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ರಸ್ತೆಯಲ್ಲಿ ನಿಂತಿದ್ದ ಮಹಿಳೆಯ ಮಾಂಗಲ್ಯ ಸರ ಕದ್ದು ಪರಾರಿಯಾದ ಕಳ್ಳ| ನಡೆದುಕೊಂಡೇ ಬಂದು ಕುತ್ತಿಗೆಯಲ್ಲಿ ಚಿನ್ನಸರ ಎಗರಿಸಿದ ಅಪರಿಚಿತ

ಒಂದೆರಡು ದಿನದ ಹಿಂದೆ ಹುಟ್ಟಿರುವ ಗಂಡು ಮಗುಇದಾಗಿದ್ದು ಅನೈತಿಕ ಸಂಬಂಧ ಅಥವಾ ಮದುವೆಗೂ ಮೊದಲೇ ಹುಟ್ಟಿರುವ ಮಗು ಎಂಬ ಸಂಶಯ ಗಳಿವೆ.  ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭೇಟಿ ನೀಡಿ ಆಸ್ಪತ್ರೆ ಗೆ ದಾಖಲಿಸಿದ್ದಾರೆ. ಘಟನೆ ಗೆ ಸಂಬಂಧಿಸಿದಂತೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಹೌದು, ಚಪ್ಪಲಿ ತುಂಬುವ ಬಾಕ್ಸ್ನಲ್ಲಿ ಮಗುವನ್ನು ಬಿಟ್ಟುಹೋಗಿದ್ದು, ಇದನ್ನು ಗಮನಿಸಿದ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋದ ಮಹಿಳಾ ಪೊಲೀಸರು ಮತ್ತು ಶಿಶುಕಲ್ಯಾಣ ಅಧಿಕಾರಿ ಮಗುವನ್ನು ಹಾಲುಣಿಸಿ ಉಪಚರಿಸಿ, ಆಸ್ಪತ್ರೆಗೆ ಸೇರಿಸಿದ್ದಾರೆ.

ವಿಸ್ಮಯ ನ್ಯೂಸ್‌ ದಿವಾಕರ ಸಂಪಖಂಡ,‌ಸಿದ್ದಾಪುರ

Exit mobile version