ಗಂಡನ ಅನುಮಾನಕ್ಕೆ ಬಲಿಯಾದ ಹೆಂಡತಿ: ಸಾವಿಗೆ ಶರಣಾದ ವಿವಾಹಿತೆ

ಶಿರಸಿ: ಪತಿಯೇ ಪತ್ನಿಯನ್ನು ಅನುಮಾನಿಸಿ ಆಕೆಗೆ ಮಾಸಿಕ ಕಿರುಕುಳ ನೀಡಿದ ಹಿನ್ನಲೆಯಲ್ಲಿ ಹೆಂಡತಿ ಸಾವಿಗೆ ಶರಣಾದ ಘಟನೆ ತಾಲೂಕಿನ ಕೊಡ್ನಗದ್ದೆಯಲ್ಲಿ ನಡೆದಿದೆ. ನೀನು ಬೇರೆಯವರ ಜೊತೆ ಸಂಬoಧ ಹೊಂದಿದ್ದೀಯ ಎಂದು ಪತಿ, ಪದೇ ಪದೇ ಹೇಳುತ್ತಿದ್ದರಿಂದ ಬೇಸರಗೊಂಡು ಪತ್ನಿ ಸಾವಿಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಪವಿತ್ರ ಮಹೇಶ್ ಮರಾಠಿ ಆತ್ಮಹತ್ಯೆಗೆ ಶರಾಣಾದ ಮಹಿಳೆ ಎಂದು ತಿಳಿದುಬಂದಿದೆ. ಮದುವೆಯಾಗಿ ಒಂದು ವರ್ಷ ಕಳೆದಿದ್ದು, ಇತ್ತಿಚೆಗೆ ಗಂಡ, ಹೆಂಡತಿಯ ನಡತೆ ಶಂಕಿಸುತ್ತಿದ್ದು, ಇದರಿಂದ ಪವಿತ್ರ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ ಎನ್ನಲಾಗಿದೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Exit mobile version