ಸ್ಕೂಟಿಗೆ ಡಿಕ್ಕಿಹೊಡೆದ ಖಾಸಗಿ ಬಸ್: ಹೊಸವರ್ಷಕ್ಕೆ ಬಟ್ಟೆ ತರಲು ತೆರಳುತ್ತಿದ್ದ ಬಾಲಕಿ ಸ್ಥಳದಲ್ಲೇ ಸಾವು: ತಂದೆಗೆ ಗಂಭೀರ ಗಾಯ

ಕಾರವಾರ: ಬಸ್ ವೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿ ಸಂಚರಿಸುತಿದ್ದ ಬಾಲಕಿ ಮೃತಪಟ್ಟ ಘಟನೆ ನಗರದ ಬಿಣಗಾದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ. ಹೌದು, ಹೊಸ ವರ್ಷದ ಹಿನ್ನಲೆಯಲ್ಲಿ ಬಟ್ಟೆ ಖರೀದಿಗೆ ಬೈಕ್ ಮೇಲೆ ನಗರಕ್ಕೆ ತೆರಳಲು ಮುಖ್ಯ ರಸ್ತೆ ದಾಟಿ ಮುಂದೆ ಚಲಿಸುತ್ತಿದ್ದ ತಂದೆ ಮಗಳಿಗೆ ಹಿಂಭಾಗದಿoದ ಖಾಸಗಿ ಬಸ್ ಡಿಕ್ಕಿಹೊಡೆದು, ಈ ದುರ್ಘಟನೆ ಸಂಭವಿಸಿದೆ. ಲವಿತಾ ಜಾರ್ಜ ಪರ್ನಾಂಡಿಸ್ (13)ಸಾವು ಕಂಡ ಬಾಲಕಿ ಎಂದು ತಿಳಿದುಬಂದಿದೆ.

ವಿಭೂತಿ ಪಾಲ್ಸ್ ಗೆ ಬಂದ ಪ್ರವಾಸಿಗ ನೀರು ಪಾಲು| ಹೊಸ ವರ್ಷಾಚರಣೆಗೂ ಮುನ್ನ ಶೋಕ ಸಾಗರ

ಮೃತ ಬಾಲಕಿಯ ತಂದೆ, ಸ್ಕೂಟಿ ಚಲಾಯಿಸುತ್ತಿದ್ದ ಜಾರ್ಜ್ ಪರ್ನಾಂಡಿಸ್ ಗಾಯಗೊಂಡಿದ್ದು, ಕಾರವಾರದ ಕ್ರಿಮ್ಸ್ ವೈದ್ಯಕೀಯ ಕಾಲೇಜಿನ ಆಸ್ಪತ್ರಗೆ ದಾಖಲಿಸಲಾಗಿದೆ. ಖಾಸಗಿ ಬಸ್ ಚಾಲಕನನ್ನು ಕಾರವಾರ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರವಾರ ಸಂಚಾರಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಘಟನೆಯಿಂದ ಆಕ್ರೋಶಗೊಂಡ ಸ್ಥಳಿಯರು ಹೆದ್ದಾರಿ ತಡೆದು ಕೆಲ ಕಾಲ ಪ್ರತಿಭಟನೆ ನಡೆಸಿದರು. ಅರೆಬರೆ ಕಾಮಗಾರಿ ನಡೆಯುವ ಬಗ್ಗೆ ಅರಿವಿದ್ದರು ಬಸ್‌ಚಾಲಕರು ವೇಗವಾಗಿ ಚಲಿಸುತ್ತಾರೆ. ಇದರಿಂದ ಈ ಭಾಗದಲ್ಲಿ ಪದೆ ಪದೆ ಅಪಘಾತವಾಗುತ್ತಿದೆ. ಇದೀಗ ಬಾಳಿ ಬದುಕಬೇಕಾದ ಬಾಲಕಿ ಸಾವನ್ನಪ್ಪಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಅಲ್ಲದೆ ಸೀಬರ್ಡ್ ಬಸ್ ಮಾಲಕರು ಸ್ಥಳಕ್ಕೆ ಆಗಮಿಸಿ ಅಪಘಾತಗೊಂಡ ಜಾರ್ಜ್ ಫರ್ನಾಂಡಿಸ್ ಅವರಿಗೆ ಸೂಕ್ತ ಚಿಕತ್ಸೆ ಕೊಡಿಸಬೇಕು. ಅಲ್ಲದೆ ಮೃತ ಬಾಲಕಿ ಕುಟುಂಬಕ್ಕೆ ಪರಿಹಾರ ನೀಡಬೇಖು ಎಂದು ಆಗ್ರಹಿಸಿದರು.

ವಿಸ್ಮಯ ನ್ಯೂಸ್, ಕಾರವಾರ

Exit mobile version