Focus NewsImportant

ಓವರ್ ಟೇಕ್ ಮಾಡುವ ವಿಚಾರವಾಗಿ ಜಗಳ: ಕರ್ತವ್ಯನಿರತ ಬಸ್ ಚಾಲಕ, ನಿರ್ವಾಹಕನ ಮೇಲೆ ಬೈಕ್ ಸವಾರನಿಂದ ಹಲ್ಲೆ

ಹೊನ್ನಾವರ :ಓವರ್ ಟೇಕ್ ಮಾಡುವ ವಿಚಾರದಲ್ಲಿ ಜಗಳವಾಗಿ ಬೈಕ್ ಸವಾರನೋರ್ವ ಸಾರಿಗೆ ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ ಘಟನೆ ಹೊನ್ನಾವರ ತಾಲೂಕಿನಲ್ಲಿ ನಡೆದಿದೆ. ಹೊನ್ನಾವರ ಡಿಪ್ಪೋಗೆ ಸೇರಿದ ಬಸ್ಸಿನ ಚಾಲಕ ಕೃಷ್ಣಾ ನಾಯ್ಕ, ನಿರ್ವಾಹಕ ಮರಿಯಪ್ಪ ಹಲ್ಲೆಗೊಳಗಾದವರಾಗಿದ್ದಾರೆ. ತಾಲೂಕಿನ ಟೊಂಕ ಬಳಿ ಪ್ರಯಾಣಿಕರನ್ನ ಇಳಿಸಿ ತೆರಳುವಾಗ ಓವರ್ ಟೇಕ್ ಮಾಡುವ ಸಂಭಂದ ಬಸ್ಸಿನ ಚಾಲಕ ಹಾಗೂ ಬೈಕ್ ಚಾಲಕನ ನಡುವೆ ಜಗಳವಾಗಿದೆ.

ವಿಭೂತಿ ಪಾಲ್ಸ್ ಗೆ ಬಂದ ಪ್ರವಾಸಿಗ ನೀರು ಪಾಲು| ಹೊಸ ವರ್ಷಾಚರಣೆಗೂ ಮುನ್ನ ಶೋಕ ಸಾಗರ

ಇದೇ ವೇಳೆ ಬೈಕ್ ಚಾಲಕ ಸಾರಿಗೆ ಬಸ್ಸಿನ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದು ಹಲ್ಲೆ ಮಾಡುವ ದೃಶ್ಯವನ್ನ ಪ್ರಯಾಣಿಕರೋರ್ವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಇನ್ನು ಬಸ್ಸಿನ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ಮಾಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕರ್ತವ್ಯ ನಿರತ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವುದಕ್ಕೆ ಹಲವರು ಖಂಡನೆ ಸಹ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button